ಹೋಲಿ ರಿಡೀಮರ್ ಶಾಲೆಯಲ್ಲಿ ವನಮಹೋತ್ಸವ ಆಚರಣೆ ಮತ್ತು ವಿವಿಧ ಸಂಘಗಳ ಉದ್ಘಾಟನೆ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜು. 30 ರಂದು ವನಮಹೋತ್ಸವ ಆಚರಣೆಯ ಜೊತೆಗೆ ಶಾಲೆಯ ಪರಿಸರ ಸಂಘ, ಇಂಗ್ಲೀಷ್ ಸಂಘ, ಕನ್ನಡ ಸಂಘ, ವಿಜ್ಞಾನ ಸಂಘ ಮತ್ತು ಕಬ್ಸ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ಸಂಘಗಳ ಉದ್ಘಾಟನೆಯನ್ನು ನಡೆಸಲಾಯಿತು. ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಲ್ಲಾ ಸಂಘಗಳ ನಾಯಕರು ತಮ್ಮ ಸಂಘದ ಗುರಿ ಹಾಗೂ ಉದ್ದೇಶಗಳು ವಾಚಿಸಿದರು.

ಸಂಘದ ನಾಯಕ ಮತ್ತು ಉಪನಾಯಕರಿಗೆ ಗುರುತಿನ ಫಲಕವನ್ನು ನೀಡಲಾಯಿತು. ವಿದ್ಯಾರ್ಥಿನಿ ಲೂಹ ಮರಿಯಮ್ ವನಮಹೋತ್ಸವ ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಶಾಲೆಯ ಮುಖ್ಯೋಪಾಧ್ಯಾಯರಾದ ವಂ. ಫಾ. ದೀಪಕ್ ಡೇಸಾರವರು ಹಚ್ಚ ಹಸಿರಿನ ವನಸಿರಿಯು ನಮ್ಮ ಜೀವನಾಡಿ. ನಾವು ಗಿಡಮರಗಳನ್ನು ಬೆಳೆಸಿ ರಕ್ಷಿಸಬೇಕೆಂದು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ ಕ್ಲಿಫರ್ಡ್ ಪಿಂಟೋರವರು ವನಮಹೋತ್ಸವ ಸಂದೇಶವನ್ನು ನೀಡಿ ವಿದ್ಯಾರ್ಥಿಗಳು ತಮ್ಮ ಸಂಘಗಳ ಮೂಲಕ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ನುಡಿದು ಶುಭ ಹಾರೈಸಿದರು. ವಿದ್ಯಾರ್ಥಿಗಳು ಪರಿಸರದ ಕುರಿತು ನೃತ್ಯ, ರೂಪಕ ಮತ್ತು ಗೀತೆಗಳ ಮೂಲಕ ಜಾಗೃತಿ ಮೂಡಿಸಿ ಮನರಂಜಿಸಿದರು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಸಹ ಶಿಕ್ಷಕಿಯರಾದ ಶ್ರೀಮತಿ ರೆನಿಟಾ ಲಸ್ರಾದೊ, ಕು. ವಿನಿತಾ ಮೋರಸ್ ಹಾಗೂ ಶ್ರೀಮತಿ ಮೇರಿ ಸುಜಾ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.