ಗುರುವಾಯನಕೆರೆ ಎಕ್ಸೆಲ್ ಪ. ಪೂ ಕಾಲೇಜಿನಲ್ಲಿ ಅಕ್ಷರ ಭಿತ್ತಿಪತ್ರಿಕೆ ಅನಾವರಣ

ಗುರುವಾಯನಕೆರೆ : ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳೆಲ್ಲಾ ಅಗತ್ಯವಾಗಿ ಬೇಕು. ಕಲಾತ್ಮಕ ಅಭಿವ್ಯಕ್ತಿ ಲಲಿತಕಲೆಗಳ ಪ್ರಮುಖ ಲಕ್ಷಣ, ಮನಸ್ಸಿಗೆ ಮುದ ನೀಡುವುದೇ ಅವುಗಳ ಪ್ರಮುಖ ಗುರಿ ಎಂದು ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಮಂಗಳೂರಿನ ಪ್ರಾಂಶುಪಾಲರಾದ ಪ್ರೊ. ಐ. ಕ್ರಿಸ್ಟೋಫರ್ ಕೋಟ್ಯಾನ್ ಅವರು ಹೇಳಿದರು.

ಗುರುವಾಯನಕೆರೆ ಎಕ್ಸೆಲ್ ಪ. ಪೂ ಕಾಲೇಜಿನಲ್ಲಿ ನಡೆದ ಅಕ್ಷರ ಭಿತ್ತಿಪತ್ರಿಕೆ ಅನಾವರಣ ಮತ್ತು ಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಾಧನೆಯ ಹಾದಿಯಲ್ಲಿ ಕಾಲೆಳೆಯುವ ವಿಘ್ನ ಸಂತೋಷಗಳು ಇರುತ್ತಾರೆ. ಅವರನ್ನು ನಿರ್ಲಕ್ಷಿಸಿ ಗುರಿಯತ್ತ ಗಮನವಿರಿಸಿದಾಗ ಮಹಾತ್ಕಾರ್ಯ ಸಾಧ್ಯ. ಆಗ ಕಾಲೆಳೆದವರೇ, ಗೌರವಿಸುವಂತಾಗುತ್ತದೆ ಎಂದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿ, ಒಳ್ಳೆಯ ಉದ್ಧೇಶದಿಂದ ಮಾಡುವ ಕಾರ್ಯಗಳಿಗೆ ದೇವರು ಸದಾ ಜೊತೆಗಿರುತ್ತಾನೆ. ಸಾಹಿತ್ಯ, ಕಲೆ, ಸಂಗೀತ ಲಲಿತಕಲೆಗಳೆಲ್ಲಾ ನಮ್ಮಲ್ಲಿ ಒಳ್ಳೆಯತನವನ್ನು ರೂಢಿಸಲು ಪ್ರೇರೇಪಿಸುತ್ತದೆ. ಹಾಗಾಗಿ ಲಲಿತಕಲೆಗಳಲ್ಲಿ ನಾವು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಂಗ್ಲ ಭಾಷಾ ಉಪನ್ಯಾಸಕ ವಿಕಾಸ್ ಹೆಬ್ಬಾರ್ ಸ್ವಾಗತಿಸಿದರು. ಪ್ರತೀಕ್ ಮತ್ತು ವಿನಯ್ ನಿರೂಪಿಸಿದರು. ಶೃತಿ, ವಿಧಾತ್ರಿ, ರೂಪಶ್ರೀ, ಶಮ, ಕ್ಷಮಾ ಪ್ರಾರ್ಥಿಸಿದರು. ಹಿಂದಿ ವಿಭಾಗದ ಪುರುಷೋತ್ತಮ್ ವಂದಿಸಿದರು. ಸಂಗೀತ-ಸಂಧ್ಯಾ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.