ಸೋಣಂದೂರು: ಅಕ್ರಮ ಅಕ್ಕಿ ದಾಸ್ತಾನು ಗೋಡೌನ್ ಮೇಲೆ ತಹಶೀಲ್ದಾರ್ ಪೃಥ್ವಿ ಸಾನಿಕಂ ದಾಳಿ: 23 ಕ್ವಿಂಟಲ್ ಅಕ್ಕಿ ವಶ

ಸೋಣಂದೂರು:  ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಮತ್ತು ಆಹಾರ ನಿರೀಕ್ಷಕರು ಜಂಟಿಯಾಗಿ  ದಾಳಿ ನಡೆಸಿ ಅಕ್ಕಿ ದಾಸ್ತಾನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸೊಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ಜು.29ರಂದು ನಡೆದಿದೆ.

ಸೊಣಂದೂರು ಗ್ರಾಮದ ಪಣಕಜೆ ಗೋವಿಂದ ಸದನದ ಮನೆಯ ಪಕ್ಕದಲ್ಲಿರುವ ಗೋಡೌನ್ ಮೇಲೆ ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಮತ್ತು ಆಹಾರ ನಿರೀಕ್ಷಕ ವಿಶ್ವ ಕೆ  ಹಾಗೂ ಸಿಬ್ಬಂದಿಗಳು  ದಾಳಿ ಮಾಡಿ  11.5 ಕ್ವಿಂಟಲ್ ಪಡಿತರ ಅಕ್ಕಿ ಮತ್ತು ಅಶೋಕ್  ಗೂಡ್ಸ್ ವಾಹನದಲ್ಲಿ ತುಂಬಿಸಿಟ್ಟ 23 ಕ್ವಿಂಟಲ್ ಅಕ್ಕಿಪತ್ತೆಯಾಗಿದ್ದು ಅಧಿಕಾರಿಗಳು ಅಕ್ರಮ ದಾಸ್ತಾನನ್ನು  ವಶಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಪುಂಜಾಲಕಟ್ಟೆ  ಪೊಲೀಸ್ ಠಾಣೆಗೆ ಆಹಾರ ನಿರೀಕ್ಷಕ ವಿಶ್ವ ಕೆ ದೂರು ನೀಡಿದ್ದಾರೆ. ಅಕ್ಕಿ ಯಾರಿಗೆ ಸೇರಿದ್ದು, ಎಲ್ಲಿಗೆ ಸಾಗಾಟ ಮಾಡುತ್ತಿದ್ದರೆಂಬ ಬಗ್ಗೆ ‌ತನಿಖೆ‌ ಮುಂದುವರಿದಿದೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.