ಅಖಿಲ ಭಾರತ ಜೀವಾ ವಿಮಾ ಪ್ರತಿನಿಧಿಗಳ ಸಂಘಟನೆಯ ರಾಜ್ಯ ಅಧ್ಯಕ್ಷರಾಗಿ ಎ.ಎಸ್. ಲೋಕೇಶ್ ಶೆಟ್ಟಿ ಧರ್ಮಸ್ಥಳ

ಬೆಳ್ತಂಗಡಿ : ಅಖಿಲ ಭಾರತ ಜೀವಾ ವಿಮಾ ಪ್ರತಿನಿಧಿಗಳ ಸಂಘಟನೆಯ ರಾಜ್ಯ ಅಧ್ಯಕ್ಷರಾಗಿ ಧರ್ಮಸ್ಥಳದ ಎ.ಎಸ್. ಲೋಕೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿಯ ಶ್ರೀ ಧ. ಮ. ಸ್ವಾಮಿ ಸಭಾ ಭವನದಲ್ಲಿ ಜು.6 ಮತ್ತು 7 ರಂದು ನಡೆದ ಸಂಘಟಯ 6 ನೇ ಕರ್ನಾಟಕ ರಾಜ್ಯ ಸಮ್ಮೇಳದ ಕೌನ್ಸಿಲ್ ಸಭೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆಮಾಡಿದರು.

ಇವರು ಉಡುಪಿ ವಿಭಾಗದ ಅಧ್ಯಕ್ಷರಾಗಿ, ಬಂಟ್ವಾಳ ಶಾಖಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಜೀವ ವಿಮಾ ನಿಗಮದ ಚೆರ್ ಮೆನ್ ಕ್ಲಬ್ ಸದಸ್ಯರಾಗಿ, ಮುಖ್ಯ ಜೀವ ವಿಮಾ ಸಲಹೆಗಾರರಾಗಿ, ಎಂಡಿಆರ್ ಟಿ ಪ್ರತಿನಿಧಿಯಾಗಿದ್ದಾರೆ.ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಹಾಗೂ ರಾಜ್ಯ ಸಂಘಟನೆಯ ಸಮಿತಿಗೆ ಬೆಳ್ತಂಗಡಿಯ ಕರುಣಾಕರ ನಾಯಕ್ ಉಜಿರೆ ಸಂಘಟನಾ ಕಾರ್ಯದರ್ಶಿಯಾಗಿ, ವಿನ್ಸೆಂಟ್ ಟಿ. ಡಿಸೋಜಾ ಬೆಳ್ತಂಗಡಿ ಆಂತರಿಕ ಲೆಕ್ಕ ಪರಿಶೋಧಕರಾಗಿ,ಧರ್ಮಸ್ಥಳದ ಜಗದೀಶ್ ಜೈನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.