ಜು.6,7: ಬೆಳ್ತಂಗಡಿಯಲ್ಲಿ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ರಾಜ್ಯ ಸಮ್ಮೇಳನ

ಬೆಳ್ತಂಗಡಿ: ಅಖಿಲ ಭಾರತ ಜೀವ ವಿಮಾ ಸಂಘಟನೆ ಉಡುಪಿ ವಿಭಾಗ ಇದರ 6ನೇ ಕರ್ನಾಟಕ ರಾಜ್ಯ ಸಮ್ಮೇಳನ ಜು.6 ಮತ್ತು 7 ರಂದು ಶ್ರೀ.ಧ.ಮಂಜುನಾಥೇಶ್ವರ ಕಲಾ ಭವನದಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ದಕ್ಷಿಣ ಮಧ್ಯವಲಯ ಅಧ್ಯಕ್ಷ ಎಲ್ ಮಂಜುನಾಥ ಹೇಳಿದರು.

ಅವರು ಜು. 5 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಿಮಾ ನೇರ ಮಾರಾಟ ನಿಲ್ಲಿಸಲು ಹಾಗೆಯೇ ಐ ಆರ್ ಡಿ ಎ ಐ ಪ್ರಕಾರ ವಿಮಾ ಪ್ರತಿನಿಧಿಗಳ ಕಮಿಶನ್ ಹೆಚ್ಚಿಸಲು ಈ ಸಮ್ಮೇಳನದಲ್ಲಿ ಆಗ್ರಹಿಸಲಾಗುವುದು. ದೇಶದಾದ್ಯಂತ  11.33 ಲಕ್ಷ ಜನ ಹಾಗೂ ರಾಜ್ಯದ ಸುಮಾರು 60 ಸಾವಿರ ಜೀವ ವಿಮಾ ಪ್ರತಿನಿಧಿಗಳ ಸೇವೆಯಿಂದ ವಿಮಾ ಸಂಸ್ಥೆ ದೇಶದ ಆರ್ಥಿಕ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ. ಎಲ್ ಐ ಸಿ ಸಂಸ್ಥೆಗೆ ಮತ್ತು ಪಾಲಿಸಿ ದಾರರ ಮಧ್ಯೆ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿರುವ ಜೀವ ವಿಮಾ ಪ್ರತಿನಿಧಿಗಳು ಮತ್ತು ಕುಟುಂಬದ ಸದಸ್ಯರಿಗೆ ಬೇಕಾಗಿರುವ ಮೂಲಭೂತ ಸೌಲತ್ತುಗಲಾದ ಉದ್ಯೋಗ ಭದ್ರತೆ, ಆರೋಗ್ಯ ವಿಮೆ, ಗುಂಪು ವಿಮೆ,ಗ್ರಾಚ್ಯುಟಿ, ಕಲ್ಯಾಣ ನಿಧಿ ಸ್ಥಾಪನೆಗೆ ಮತ್ತು ಕಮಿಷನ್ ದರ ಹೆಚ್ಚಿಸಲು ಹಾಗೆಯೇ ಸಂಸ್ಥೆ ಯ ಎಲ್ಲಾ ಹೊಸ ಪಾಲಿಸಿಗಳ ಮಾರಾಟಕ್ಕೆ ಪ್ರತಿನಿಧಿಗಳಿಗೆ ಅವಕಾಶ ನೀಡುವುದು ಮೊದಲಾದ ಬೇಡಿಕೆಗಳ ಬಗ್ಗೆ ಸಮ್ಮೇಳನದಲ್ಲಿ ಆಗ್ರಹಿಸಿ ಚರ್ಚಿಸಲಾಗುವುದು ಎಂದರು.

ಈ ಸಮ್ಮೇಳನಕ್ಕೆ ಉಡುಪಿ ವಿಭಾಗದ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷ ಸಮ್ಮೇಳನದ ಕೋಶಾಧಿಕಾರಿ ಎಎಸ್ ಲೋಕೇಶ್ ಶೆಟ್ಟಿ ಮಾತನಾಡಿ ಈ ಸಮ್ಮೇಳನದಲ್ಲಿ ರಾಜ್ಯದ 8 ವಿಬಾಗಗಳಾದ ಮೈಸೂರು, ರಾಯಚೂರು, ಬೆಳಗಾವಿ, ಉಡುಪಿ, ಧಾರವಾಡ, ಶಿವಮೊಗ್ಗ ಹಾಗೂ ಬೆಂಗಳೂರು I ಮತ್ತು II ವಿಭಾಗದ ಆಯ್ದ 350 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಹಾಗೂ ವಿವಿಧ ಗಣ್ಯ ಅತಿಥಿಗಳು,  ಬಂಟ್ವಾಳ ಶಾಖೆಯ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ  ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಕೋಶಾಧಿಕಾರಿ ಡಿಸಿ ಶಿವಮೂರ್ತಿ, ಪ್ರಧಾನ ಸಂಚಾಲಕ ಪ್ರಕಾಶ್ ಕುಮಾರ್ ಕೆ , ಅಧ್ಯಕ್ಷ ಎಂ ಎಸ್ ಭಟ್,   ಪ್ರಧಾನ ಕಾರ್ಯದರ್ಶಿ ನಾರಾಯಣ ಅಮಿನ್ ಉಪಸ್ಥಿತರಿದ್ದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.