ಮಚ್ಚಿನ: ಮಂಡೆಜಾರು ಇಲ್ಲಿಯ ನಿವಾಸಿ ನಾರಾಯಣ ಪುಜಾರಿ ಎಂಬವರ ಮನೆಯ ಛಾವಣಿ ಕುಸಿದು ಮನೆಯೊಳಗೆ ವಾಸ ಮಾಡಲು ಅಸಾಧ್ಯ ಸ್ಥಿತಿಯಲ್ಲಿದ್ದುದನ್ನು ಕಂಡ ಆ ಭಾಗದ ವಾರ್ಡ್ ಸದಸ್ಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ತಕ್ಷಣ ಸ್ಪಂದಿಸಿ ಮನೆಗೆ ಶೀಟ್ ಹಾಕುವ ಮುಖೇನ ದುರಸ್ಥಿ ಕಾರ್ಯವನ್ನು ಮಾಡಿದರು.
ಈ ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದ ವೃದ್ಧ ಜೀವನವನ್ನು ಕಂಡು ವಾರ್ಡ್ ಸದಸ್ಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.