ಉಜಿರೆ: ಯುವತಿಯೋರ್ವರು 9 ತಿಂಗಳ ಮಗುವಿನೊಂದಿಗೆ ನಾಪತ್ತೆ

ಬೆಳ್ತಂಗಡಿ: ಉಜಿರೆಯ ನಿನ್ನಿಕಲ್ಲು ಎಂಬಲ್ಲಿ  ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯೋರ್ವರು ತನ್ನ 9 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಜು.3 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನಾಪತ್ತೆಯಾದವರು ಉಜಿರೆಯ ನಿನ್ನಿಕಲ್ಲು ನಿವಾಸಿ ಪ್ರಜೀತ(27ವ) ಹಾಗೂ ಅವರ ಪುತ್ರ ಸುಮಂತ್(9 ತಿಂಗಳು) ಎಂದು ತಿಳಿದು ಬಂದಿದೆ.

ಪ್ರಜೀತ ಅವರ ಪತಿ ರಿಕ್ಷಾ ಚಾಲಕರಾಗಿದ್ದು ಕೆಲಸಕ್ಕೆ ಹೋಗಿದ್ದರು. ನಂತರ ಅವರ ತಾಯಿ ಹುಲ್ಲಿಗೆಂದು ತೋಟಕ್ಕೆ ಹೋಗಿದ್ದಾಗ  ಪ್ರಜೀತ ತನ್ನ 9 ತಿಂಗಳ ಮಗನೊಂದಿಗೆ ಯಾರಿಗೂ ಹೇಳದೆ ಮನೆಯಿಂದ ಹೋದವರು  ಇದುವರೆಗೆ ವಾಪಾಸು ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.