ದ.ಕ ಮತ್ತೆ ಭೂಕಂಪನ: ಆತಂಕಗೊಂಡ ಜನತೆ

ಸಾಂಧರ್ಬಿಕ ಚಿತ್ರ

ಬೆಳ್ತಂಗಡಿ: ದ.ಕ ಜಿಲ್ಲೆಯ ಸುಳ್ಯತಾಲೂಕು ಹಾಗೂ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಕಂಪನ ಅನುಭವವಾಗಿದ್ದು, ಜೂ.28ರ ಮುಂಜಾನೆ ಮತ್ತೊಮ್ಮೆ ಕಂಪಿತವಾಗಿದ್ದು ಜನರು ಭಯಭೀತರಾಗಿ ಮನೆಗಳಿಂದ ಹೊರಗೋಡಿದ್ದಾರೆ.

ಬಹುತೇಕ ಕಡೆಯಲ್ಲಿ ಭೂಮಿ ಕಂಪಿತವಾಗಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಮನೆಗಳಲ್ಲಿ ಸಾಕಿದ್ದ ಸಾಕು ಪ್ರಾಣಿಗಳು ಮಲಗಿದ್ದಲ್ಲಿಂದ ಎದ್ದು ಗಾಬರಿ ವ್ಯಕ್ತಪಡಿಸಿದೆ, ಕಬ್ಬಿಣದ ಸಲಕರಣೆಗಳ ಮೂಲಕ ಕಂಪನ ಚೆನ್ನಾಗಿ ಅನುಭವವಾಗಿದೆ. ಎರಡನೇ ಭಾರಿ ಭೂಮಿ ಕಂಪಿತಗೊಂಡಿರುವುದು ಜನರಲ್ಲಿ ಗಾಬರಿಯುಂಟು ಮಾಡಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.