ಮೈರೋಳ್ತಡ್ಕ: ಬಂದಾರು ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಇಲ್ಲಿ ಶಾಲಾ ಆವರಣ,ಮೈದಾನ,ಅಡಿಕೆ ತೋಟದಲ್ಲಿ ಗಿಡಗಂಟಿಗಳನ್ನು ತೆಗೆಯುವ ಸ್ವಚ್ಚತಾ ಅಭಿಯಾನ ಮತ್ತು ಶ್ರಮದಾನ ಕಾರ್ಯಕ್ರಮ ಜೂ.25 ರಂದು ನಡೆಸಲಾಯಿತು.
ಸುಮಾರು 50 ಜನ ವಿದ್ಯಾರ್ಥಿಗಳ ಪೋಷಕರು,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವಸದಸ್ಯರು,ಶಾಲಾ ಮುಖ್ಯೋಪಾಧ್ಯಾಯರು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.