ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಬಾಲಕೃಷ್ಣ ಭಂಡಾರಿ ಮತ್ತು ಶಕುಂತಲಾ ಬಿ ಭಂಡಾರಿ ದಂಪತಿಯ ಪುತ್ರಿ ಕೃತಿಕಾ ಬಿ ಭಂಡಾರಿಯವರು 2021-22 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 568 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ ಇವರಿಗೆ ಜೂ.25 ರಂದು ಭಂಡಾರಿ ಸಮಾಜ ಸಂಘ ಬೆಳ್ತಂಗಡಿ ಹಾಗೂ ಬೆಳ್ತಂಗಡಿ ಭಂಡಾರಿ ಯುವ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ, ಉಜಿರೆ ಸಂಘದ ಹಿರಿಯರಾದ ಕೇಶವ ಭಂಡಾರಿ ಬೆಳ್ತಂಗಡಿ, ಪೂವಪ್ಪ ಭಂಡಾರಿ ಮದ್ದಡ್ಕ, ಯುವರಾಜ ಭಂಡಾರಿ ಇಡ್ಯಾಳ ಹಾಗೂ ಭಂಡಾರಿ ಯುವ ವೇದಿಕೆ ಅಧ್ಯಕ್ಷ ವಿಶ್ವನಾಥ್ ಭಂಡಾರಿ ಉಜಿರೆ ಇವರು ಉಪಸ್ಥಿತರಿದ್ದರು.