ಬೆಳ್ತಂಗಡಿ : ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್, ಕುವೆಂಪು, ಪರಿಯಯ್, ಕೈಯಾರೆ, ಮುಂತಾದ ಮಹನೀಯರ ಜೀವನ ಚರಿತ್ರೆಯನ್ನು ರೋಹಿತ್ ಚಕ್ರವರ್ತಿ ನೇತೃತ್ವದ ಪರಿಷ್ಕರಣಾ ಸಮಿತಿ ತಿರುಚಿ ಅವಮಾನಿಸಿದ್ದು ಸರಿಪಡಿಸದೇ ಇದ್ದರೆ ಕಾಗ್ರೇಸ್ ಪಕ್ಷದ ವತಿಯಿಂದ ಹೋರಾಟ ಅನಿವಾರ್ಯ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಜೂ.25 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಪಠ್ಯ ಪುಸ್ತಕಗಳ ಪರಿಷ್ಕರಣೆಯನ್ನು ವಿರೋಧಿಸಿ ನಾಡಿನ ಮಠಾಧೀಶರು, ಪ್ರಗತಿಪರ ಲೇಖಕರು ಹಲವು ಮುಖಂಡರು ಮುಖ್ಯ ಮಂತ್ರಿ ಗಳಿಗೆ ಪತ್ರ ಬರೆದಿದ್ದಾರೆ ತಕ್ಷಣ ಶಿಕ್ಷಣ ಸಚಿವರನ್ನು ವಜಾಗೊಳಿಸಿ ಪಠ್ಯ ಪುಸ್ತಕಗಳನ್ನು ಸರಿಪಡಿಸಿ ಗೊಂದಲಕ್ಕೆ ತೆರೆ ಎಳೆಯ ಬೇಕು ಎಂದು ಅಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಬೆಳ್ತಂಗಡಿ ಉಭಯ ಬ್ಲಾಕ್ ಅಧ್ಯಕ್ಷರುಗಳಾದ ರಂಜನ್ ಜಿ. ಗೌಡ, ಕೆ. ಶೈಲೇಶ್ ಕುಮಾರ್, ಪಕ್ಷದ ವಕ್ತಾ ರ ಮನೋಹರ್ ಕುಮಾರ್ ಇಳಂತಿಲ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಮಹಿಳಾ ಘಟಕದ ಬೆಳ್ತಂಗಡಿ ನಗರ ಸಮಿತಿಯ ಅಧ್ಯಕ್ಷೆ ವಂದನಾ, ಕಾರ್ಯದರ್ಶಿ ಸೌಮ್ಯ ಉಪಸ್ಥಿತರಿದ್ದರು.