ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗವು “ಕೆ.ಜಿ.ಎಫ್ – 3” ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಬೃಹತ್ ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟವನ್ನು ಜೂ.21,22 ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂದನೀಯ ಬಾಸಿಲ್ ವಾಸ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯ ಪ್ರಾಂಶುಪಾಲರಾದ ಡಾ. ಟಿ.ಕೆ ಶರತ್ ಕುಮಾರ್ ರವರು ಭಾಗವಹಿಸಿದ್ದರು. “ಸ್ಪರ್ಧಾ ಕೂಟವನ್ನು. ಜ್ಞಾನ (K-Knowledge), ಗುರಿ (G-Goal), ಮತ್ತು ಉತ್ಸವ (F-Fiesta) ಎಂಬ ಆಧಾರದ ಮೇಲೆ ಆಯೋಜಿಸಲಾಗಿತ್ತು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಸುಮಾರು 140 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು . ಜೂ.22 ರಂದು ಸಮಾರೋಪ ಸಮಾರಂಭದ ಗೌರವಾನ್ವಿತ ಅತಿಥಿಯಾಗಿ ತುಳು ಚಲನಚಿತ್ರ ಮತ್ತು ಕನ್ನಡ ಚಿತ್ರಗಳಲ್ಲಿ ಮಿಂಚಿದ ಭಾರತೀಯ ಚಲನಚಿತ್ರ ನಟ ಅರ್ಜುನ್ ಡಿ ಕಾಪಿಕಾಡ್ ರವರು ಉಪಸ್ಥಿತರಿದ್ದು ಸ್ಪರ್ಧಾಳುಗಳಿಗೆ ಬಹುಮಾನವನ್ನು ವಿತರಿಸಿದರು,. ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್.ಎಂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿ ಸಂಯೋಜಕರಾದ ಸ್ವಾತಿ ಶೆಣೈ ಮತ್ತು ಜೋಸ್ ಥಾಮಸ್ ಸ್ವಾಗತಿಸಿದರು, ವಿಲ್ಮಾ ಪ್ರಿಯಾ ಮೊರಾಸ್ ಮತ್ತು ಶರತ್ ವಂದಿಸಿದರು, ವಿಭಾಗದ ಮುಖ್ಯಸ್ಥರಾದ ಪ್ರಾಧ್ಯಾಪಕ ನೆಲ್ಸನ್ ಮೋನಿಸ್ ಮತ್ತು ವಿದ್ಯಾರ್ಥಿ ಸಂಯೋಜಕರಾದ ವಿಲ್ಮಾ ಪ್ರಿಯಾ ಮೊರಾಸ್, ಶರತ್, ಸ್ವಾತಿ ಶೆಣೈ ಮತ್ತು ಜೋಸ್ ಥಾಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಜೇಶ ಎನ್.ಎಂ, ನಮ್ರತಾ ಸಮೀಕ್ಷಾ ಮತ್ತು ರಶ್ಮಿ ನಿರ್ವಹಿಸಿದರು.