ಉಜಿರೆ ಗ್ರಾಮ ಪಂಚಾಯತ್ ಗೆ ಅರುಣಾಚಲ ಪ್ರದೇಶದ ಜನಪ್ರತಿನಿಧಿಗಳು ಭೇಟಿ

ಉಜಿರೆ : ಉಜಿರೆ ಗ್ರಾಮ ಪಂಚಾಯತ್ ಗೆ ಅರುಣಾಚಲ ಪ್ರದೇಶದ ಚುನಾಯಿತ ಜನ ಪ್ರತಿನಿಧಿಗಳು ಜೂ.23 ರಂದು ಭೇಟಿ ನೀಡಿ ಗ್ರಾಮ ಪಂಚಾಯತಿ ಕೆಲಸ ಕಾರ್ಯಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಂಚಾಯತ್ ರಾಜ್ ಸಂಸ್ಥೆಯ ಬೋಧಕರು ಹಾಗೂ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೊತೆ ಸೇರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರು.

ಈ ಸಂದರ್ಭ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ., ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ. ಎಚ್.ಪ್ರಕಾಶ್ ಶೆಟ್ಟಿ ಜನಪ್ರತಿನಿಧಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಯೋಜನೆಗಳ ಮಾಹಿತಿಯನ್ನು ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಂತ್ ಯು. ಬಿ. ಸಭೆಗೆ ನೀಡಿದರು ತದನಂತರ ಅರುಣಾಚಲ ಪ್ರದೇಶದಿಂದ ಆಗಮಿಸಿರುವ ಜನಪ್ರತಿನಿಧಿಗಳು ಉಜಿರೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯೊಂದಿಗೆ ಸಂವಾದ ನಡೆಸಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಗ್ರಾಮ ಪಂಚಾಯತದ ಡಿಜಿಟಲ್ ಗ್ರಂಥಾಲಯ ನೋಡಿ ತುಂಬಾ ಸಂತೋಷಗೊಂಡು ಬಂದಿರುವ ಜನಪ್ರತಿನಿಧಿಗಳು ಒತ್ತಾಯಪೂರ್ವಕವಾಗಿ ಗ್ರಾಮ ಪಂಚಾಯತಿನ ಗ್ರಂಥಾಲಯಕ್ಕೆ ತಮ್ಮ ವತಿಯಿಂದ ಹನ್ನೊಂದು ಸಾವಿರ ರೂಪಾಯಿಯ ದೇಣಿಗೆಯನ್ನು ನೀಡಿ ಸಂತೋಷಪಟ್ಟರು ಗ್ರಾಮ ಪಂಚಾಯತದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಒಗ್ಗಟ್ಟನ್ನು ಕಂಡು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು ಉಜಿರೆ ಗ್ರಾಮ ಪಂಚಾಯತ ತ್ಯಾಜ್ಯ ನಿರ್ವಹಣೆ, ಮಹಿಳಾಸಬಲೀಕರಣ , ಸೋಲಾರ್ ಪಾರ್ಕ್ ಮಾದರಿ ಅಂಗನವಾಡಿಗಳು, ಮಾದರಿ ಪುಸ್ತಕಗಳು, ಕಚೇರಿ ವ್ಯವಸ್ಥೆ ಇವೆಲ್ಲವನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.