ಕೊಕ್ಕಡ: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ವ್ಯಾಪ್ತಿಗೆ ಸೇರಿದ ಕಾಪಿನಬಾಗಿಲು ಎಂಬಲ್ಲಿ ಟಾಟಾ ಸುಮೋ ಕಾರು ಗುಂಡಿಗೆ ಬಿದ್ದು 3 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜೂ.23ರಂದು ನಡೆದಿದೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಟಾಟಾ ಸುಮೋ ಕಾಪಿನಬಾಗಿಲು ಸಮೀಪ ಬಸ್ ವೊಂದಕ್ಕೆ ಸೈಡ್ ಕೊಡುವ ವೇಳೆ ಪಲ್ಟಿಗೊಂಡಿದೆ.
ಇಲ್ಲಿ ಮೋರಿಯ ಮೇಲೆ ತಡೆಗೋಡೆ ಇಲ್ಲದಿರುವುದು ಹಾಗೂ ರಸ್ತೆ ಬಿಟ್ಟು ಸ್ಥಳಾವಕಾಶ ಇಲ್ಲದಿರುವುದು ಹಾಗೂ ರಸ್ತೆ ತನಕ ಗಿಡ ಗಂಟಿ ಬೆಳೆದಿರುವುದು ಈ ಅಪಘಾತಕ್ಕೆ ಕಾರಣವಾಗಿದೆ.