ಅಳದಂಗಡಿ: ಕಲಾ ಆರಾಧನೆ ಕಾರ್ಯಕ್ರಮ

ಅಳದಂಗಡಿ : ಆಮಂತ್ರಣ ಪರಿವಾರ , ಶ್ರಮಿಕ ಸೇವಾ ಟ್ರಸ್ಟ್ ರಿ.ಬೆಳ್ತಂಗಡಿ , ರೋಟರಿ ಕ್ಲಬ್ ರಾಕ್ ಸಿಟಿ ಕಾರ್ಕಳ, ಕೋಶಮಟ್ಟಂ ಫೈನಾನ್ಸ್ ಸತ್ಯದೇವತಾ ದೈವಸ್ಥಾನ ಅಳದಂಗಡಿ ಇದರ ಸಾರಥ್ಯದಲ್ಲಿ ಕಲಾ ಆರಾಧನೆ ಜೂನ್ 19 ರಂದು ಕಾರ್ಕಳದ ಪೆರ್ವಾಜೆ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಕೋಶಮಟ್ಟಂ ಫೈನಾನ್ಸ್ ರೀಜನಲ್ ಮ್ಯಾನೇಜರ್ ಶಾಜಿ ಕುರಿಯನ್ ದೀಪ ಪ್ರಜ್ವಲನ ಮಾಡಿ ಪ್ರತಿಭೆಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ತೆಲಿಕೆದ ತೆನಾಲಿ ಸುನಿಲ್ ಕುಮಾರ್ ನೆಲ್ಲಿಗುಡ್ಡೆ, ಶಿಕ್ಷಕಿ ವಂದನಾ ರೈ ಕಾರ್ಕಳ, ರೋಟರಿ ಕ್ಲಬ್ ಸದಸ್ಯ ರಮೇಶ್ ಶೆಟ್ಟಿ ರೆಂಜಾಳ,ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಹೆಗಡೆ, ಕಲಾವಿದೆ ಭಾರತೀಗೋಪಾಲ್ ಚೇತನ್ ಶಿವಪುರ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಇರುವ ವಿವಿಧ ರಂಗದ ಪ್ರತಿಭೆಗಳನ್ನು, ಸಮಾಜ ಸೇವಕರನ್ನು, ಪ್ರೋತ್ಸಾಹಕರನ್ನು ಈ ಸಂದರ್ಭದಲ್ಲಿ ಗೌರವಿಸುವ ಕಾರ್ಯಕ್ರಮ ಕಲಾ ಆರಾಧನೆ ಹೆಸರಲ್ಲಿ ನಡೆಯಿತು.

ಆರದಿರಲಿ ಬದುಕು ತಂಡದ ಪದ್ಮಶ್ರೀ ಭಟ್,ಡಾ| ಶೇಖರ ಅಜೆಕಾರು, ಶ್ವೇತಾ ಜೈನ್ ಕಾರ್ಕಳ, ದಿವ್ಯ ಪ್ರಸನ್ನ ರಾವ್, ಸಿಂಧೂ ರಾವ್, ಸಿಂಧೂರ ಕಲಾವಿದರು ತಂಡದ ಲೀಲಾವತಿ ಪೊಸಲಾಯಿ, ವೀರಕೇಸರಿ ಬೆಳ್ತಂಗಡಿ, ಟೀಮ್ ಅಜಿಲ ಸೀಮೆ ಅಳದಂಗಡಿ, ಕಲಾ ಪ್ರತಿಭೆಗಳು ತಂಡ, ಸೂಕ್ತ ನ್ಯೂಸ್ ಚಾನಲ್ ಮುಖ್ಯಸ್ಥ ಪ್ರದೀಪ್ ಕುಕ್ಕಿಪಾಡಿ, ನಮ್ಮ ಟಿವಿಯ ರಾಜೇಶ್ ಭಂಡಾರಿ, ಪ್ರದೀಪ್ ರಾವ್ ಮಂಗಳೂರು, ವಿಜಯ ಮುಂಡ್ಲಿ, ರೇಣುಕಾ ಕಣಿಯೂರು,ಮಾನಸ ಭಟ್ ಮೂಡಬಿದ್ರೆ, ಚೈತ್ರ ಕಬ್ಬಿನಾಲೆ, ಧನರಾಜ ಆಚಾರ್ಯ, ಸದಾನಂದ ಬಿ.ಕುದ್ಯಾಡಿ, ಅರುಣ್ ಜೈನ್ ಅಳದಂಗಡಿ, ಮಧುಕರ ಆಚಾರ್ಯ ಕೊಟೇಶ್ವರ, ಆಚಾರ್ಯ ಪ್ರಕಾಶ್ ಮೂಡಬಿದ್ರೆ, ಸುಬ್ರಹ್ಮಣ್ಯ ನಾಯ್ಕ್, ಪ್ರಸನ್ನ ಆಚಾರ್ಯ, ಲಕ್ಷ್ಮಣ ಬೆಳ್ವೆ , ಪ್ರಸಾದ್ ಉಡುಪಿ, ರಾಕೇಶ್ ಪೊಳಲಿ,
ಮುಂತಾದವರು ಭಾಗವಹಿಸಿದ್ದರು.

ಸನ್ಮಾನಿತರ ಪರಿಚಯವನ್ನುಕಾವ್ಯಪ್ರಸಾದ್ ಭಟ್ ಕೊಚ್ಚಿನ್ ಮತ್ತು ಹೇಮ ಜಯರಾಮ್ ರೈ ಕುರಿಯ ನೆರವೇರಿಸಿದರು.

ಶ್ರೇಯಾ ಕಡಬ ವಿಜಯ ಕುಮಾರ್ ಇವರ ಪೆನ್ಸಿಲ್ ಚಿತ್ರವನ್ನು ಬಿಡಿಸಿದ್ದು ಈ ವೇಳೆ ಸಮರ್ಪಿಸಿದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.