ಉಜಿರೆ ಶ್ರೀ ಧ.ಮಂ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಪ್ರಮಾಣ ವಚನ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ

ಉಜಿರೆ: ವಿದ್ಯಾರ್ಥಿಗಳು ಆಸಕ್ತಿದಾಯಕವಾಗಿ ಅಧ್ಯಯನ ಮಾಡಲು ಮತ್ತು ಸರ್ವತೋಮುಖವಾದ ಬೆಳವಣಿಗೆ ಹೊಂದಲು ಸಂಘ ಚಟುವಟಿಕೆಗಳು ಮತ್ತು ವಿದ್ಯಾರ್ಥಿ ಸರಕಾರಗಳು ಪೂರಕ ಅವಕಾಶ ಕಲ್ಪಿಸುತ್ತದೆ ಎಂದು ಬ್ಯಾಂಕ್ ಆಫ್ ಬರೋಡ ಬೆಳ್ತಂಗಡಿ ಶಾಖಾ ಪ್ರಬಂಧಕರಾದ ಶ್ರೀವಿನಾಯಕ ಹೆಗ್ಡೆ ಇವರು ಹೇಳಿದರು.

ಅವರು ಉಜಿರೆ ಶ್ರೀ ಧ.ಮಂ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ  ಬಾಲಕೃಷ್ಣ ನಾಯ್ಕ್ ಇವರು ವಹಿಸಿದ್ದು ,ವಿದ್ಯಾರ್ಥಿ ಸರಕಾರದ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಂಘಗಳ ಕುರಿತ ಮಾಹಿತಿಯನ್ನು ನಿಯೋಜಿತ ಶಿಕ್ಷಕ-ಶಿಕ್ಷಕಿಯರು ನೀಡಿದರು.

ರೇವತಿ ಸ್ವಾಗತಿಸಿದರು, ಅನುಷಾ ಕಾರ್ಯಕ್ರಮ ನಿರೂಸಿದರು, ಪವನ್ ಕುಮಾರ್ ಧನ್ಯವಾದ ಗೈದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.