ಉಜಿರೆ : ಉಜಿರೆ ಮಹಾವೀರ ಸೂಪರ್ ಮಾರ್ಕೆಟ್ ನಲ್ಲಿ ಕೆಲಸಕ್ಕಿದ್ದ ತುಮಕೂರಿನ ಪ್ರವೀಣ್ ಎಂಬುವರು ಅಶೋಕ್ ಲೈಲಂಡ್ ದೋಸ್ ಗೂಡ್ಸ್ ಗಾಡಿಯನ್ನು ಸರ್ವಿಸ್ ಇದೆ ಎಂದು ಮಂಗಳೂರಿಗೆ ಕೊಂಡು ಹೋಗಿ ಅಲ್ಲಿಂದ ತುಮಕೂರಿಗೆ ಕದ್ದು ಹೊಯ್ಯಿದ ಘಟನೆ ಜೂನ್.21ರಂದು ನಡೆದಿದೆ.
ಸೂಪರ್ ಮಾರ್ಕೆಟ್ ನ ಮಾಲಕರ ಪ್ರಭಾಕರ್ ಹೆಗ್ಡೆ ಬೆಳ್ತಂಗಡಿ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ನಂದಕುಮಾರ ಮಾರ್ಗದರ್ಶನದಿಂದ ಬೆಳ್ತಂಗಡಿ ಪೊಲೀಸರಾದ ವೃಷಭ ಮತ್ತು ಚರಣ್ ಬೇನ್ನಟ್ಟಿ ತುಮಕೂರಿನಲ್ಲಿ ಹಿಡಿದು ಬಂಧಿಸಿದ್ದಾರೆ.
ಇವರ ಕಾರ್ಯಾಚರಣೆಗೆ ಮಾಲಕರಾದ ಪ್ರಭಾಕರ ಹೆಗ್ಡೆ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ