ಬೆಳಾಲು ಅನಂತೋಡಿ ದೇವಸ್ಥಾನದಲ್ಲಿ ಯೋಗ ದಿನಾಚರಣೆ

ಬೆಳಾಲು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ ಹಾಗು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ ಇದರ ಜಂಟಿ ಆಶ್ರಯದಲ್ಲಿ. ಅಂತರ್ ರಾಷ್ಟ್ರೀಯ  ಯೋಗ ದಿನಾಚರಣೆ ಜೂ.21 ರಂದು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ವಹಿಸಿದ್ದರು.ಶ್ರೀ ಧ. ಮ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಡಾ. ಪ್ರೀಯ, ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇoದ್ರ ಕುಮಾರ್,ಭಾಗವಹಿಸಿ ದ್ದರು, ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂದರ ಕುಮಾರ್ ಬೆಳಾಲು ಗುತ್ತು, ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೇರ್ಮುಣ್ಣಾಯ, ಬೆಳಾಲು ಶ್ರೀ ಧ. ಮ. ಪ್ರೌಢ ಶಾಲಾ ಮುಖ್ಯಪಾಧ್ಯಾಯ ರಾಮಕೃಷ್ಣ ಭಟ್, ಬೆಳಾಲು ಶ್ರೀ ಸರಸ್ವತಿ ಅನುದಾನಿತ ಹಿ. ಪ್ರಾ. ಶಾಲಾ ಮುಖ್ಯಪಾಧ್ಯಾಯ ಚಿದಾನಂದ, ಮಾಯಾ ಉನ್ನತಿಕರಿಸಿದ ಸರಕಾರಿ ಹಿ. ಪ್ರಾ. ಶಾಲಾ ಮುಖ್ಯಪಾಧ್ಯಾಯ ವಿಠ್ಠಲ ಎಂ., ಬದನಾಜೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಜಮುನಾ, ದೈಹಿಕ ಶಿಕ್ಷಕ ಅಖಿಲ್ ಕುಮಾರ್, ಉಜಿರೆ ವಲಯದ ಸಿ ಆರ್. ಪಿ. ಪ್ರತಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಟ್ಟು 270 ಶಿಭಿರಾರ್ಥಿಗಳು ಯೋಗಾಸನ ಮಾಡಿದರು.10 ದಿನಗಳ ಉಚಿತ ಯೋಗಭ್ಯಾಸವನ್ನು ಶ್ರೀ ಧ. ಮ. ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ.ಪ್ರಶಾಂತ್ ಶೆಟ್ಟಿ ನೇತೃತ್ವದಲ್ಲಿ 7 ಕೇಂದ್ರಗಳಲ್ಲಿ ಯೋಗ ಶಿಬಿರ ನಡೆಯಿತು. ಧರ್ಮೇoದ್ರ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ನಿಶಾ ಬನoದೂರು ಸ್ವಾಗತಿಸಿ ಪ್ರಖ್ಯಾತ್ ಮನಿಕ್ಕಳ ವಂದಿಸಿದರು. ವಿದ್ಯಾ ಶ್ರೀನಿವಾಸ ಗೌಡ ನಿರೂಪಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.