ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೆಲವು ಕಡೆಗಳಲ್ಲಿ ಸಾಕು ಬೆಕ್ಕುಗಳಿಗೆ ವೈರಲ್ ಫೀವರ್ ಸೋಂಕು ತಗುಲಿ ಬೆಕ್ಕು ಗಳ ಸಾವು ಹೆಚ್ಚುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತಿದೆ. ಬೆಕ್ಕುಗಳಿಗೆ ಜ್ವರ ಕಾಣಿಸಿಕೊಂಡು ಹೊಟ್ಟೆಗೆ ತಿನ್ನುವುದನ್ನು ಬಿಟ್ಟು ಬಿಡುತ್ತದೆ ಎರಡು ಮೂರು ದಿನಗಳ ನಂತರ ಸಾವನ್ನಪ್ಪುತ್ತದೆಂದು ತಿಳಿದು ಬಂದಿದೆ.
ಕಣಿಯೂರು ಗ್ರಾಮ ದ ಕಣಿಯೂರು ಸುದರ್ಶನ ಹೆಗ್ಡೆ ಯವರ 17 ಬೆಕ್ಕುಗಳು ಸತ್ತು ಹೋಗಿದ್ದು ಇದೇ ಕಾಯಿಲೆಯಿಂದ ಸತ್ತಿರಬಹುದೆಂದು ಶಂಕಿಸಲಾಗಿದೆ. ಈ ಕಾಯಿಲೆಗೆ ಚುಚ್ಚು ಮದ್ದು ಪಶುಸಂಗೋಪನಾ ಇಲಾಖೆಯಲ್ಲಿ ಲಭ್ಯವಿರುವುದಾಗಿ ತಿಳಿದುಬಂದಿದೆ.
ಸಂಬಧಪಟ್ಟ ಇಲಾಖೆ ಗ್ರಾಮಸ್ಥರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಿದಲ್ಲಿ ಬೆಕ್ಕುಗಳ ಸಾವನ್ನು ನಿಯಂತ್ರಣ ಮಾಡಬಹುದೆಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.