ವೇಣೂರು :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಸಂತ ಮಂಟಪ ಗುಡಿ, ವನ ಶಾಸ್ತ್ರರ ಹಾಗು ನಾಗರ ಕಟ್ಟೆಗೆ ಶಿಲಾನ್ಯಾಸ ಜೂ.20 ರಂದು ತಂತ್ರಿಗಳಾದ ನಡಪಾಂತಾಯ ವೇ. ಮೂ. ಶ್ರೀ ಪಾದ ಪಾಂಗಣ್ಣಯರ ಪೌರೋತ್ಯದಲ್ಲಿ ಜರಗಿತು.
ವಸಂತ ಮಂಟಪದ ದಾನಿಗಳಾದ ದಿ/ ಬಾಬು ದೇವಾಡಿಗರ ಸ್ಮರಣಾರ್ಥ ಪತ್ನಿ ಶ್ರೀಮತಿ ಗುಲಾಬಿ ದೇವಾಡಿಗ ಮತ್ತು ಮಕ್ಕಳು ತಿರುಗನಬೆಟ್ಟು ಮೂಡುಕೋಡಿ, ವನ ಶಾಸ್ತ್ರರ ಗುಡಿಯ ಸೇವಾಕರ್ತರಾದ ದಿ. ಡಾ. ಬಿ. ಪಿ. ಇಂದ್ರರ ಸ್ಮರಣಾರ್ಥ ಪತ್ನಿ ಸುನಂದ ಮತ್ತು ಮಕ್ಕಳು, ನಾಗರ ಕಟ್ಟೆಯ ಸೇವಾ ಕರ್ತರಾದ ಪಚ್ಚೆರಿ ದಿ.ಸೀತು ಗಂಗಯ್ಯ ಪೂಜಾರಿ ಸ್ಮರಣಾರ್ಥ ರಮೇಶ್ ಪೂಜಾರಿ ಜೈ ಭವಾನಿ ಹೋಟೆಲ್ ಪೂರ್ಣ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಎನ್. ಪುರುಷೋತ್ತಮ ರಾವ್,ಆಡಳಿತ ಸಮಿತಿ ಸದಸ್ಯರುಗಳಾದ ಅಣ್ಣು ಮೇಸ್ತ್ರಿ, ಕಾರ್ತಿಕ್, ಚಂಪಾ, ಭಾಸ್ಕರ ಪೈ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ, ವೇಣೂರು ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ವೇಣೂರು ಗ್ರಾಮ ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಕುಕ್ಕೆಡಿ ಗ್ರಾ. ಪ.ಅಧ್ಯಕ್ಷ ಜನಾರ್ದನ ಪೂಜಾರಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ, ಅಶೋಕ್ ಪನೂರ್ ಇತರ ಗಣ್ಯರು ಭಕ್ತಾದಿಗಳು ಹಾಜರಿದ್ದರು