ನಡ: ಸರಕಾರಿ ಪದವಿ ಪೂರ್ವ ಕಾಲೇಜು ನಡ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ವಿಭಾಗದಲ್ಲಿ ಹಾಜರಾದ ಒಟ್ಟು ೭೦ ವಿದ್ಯಾರ್ಥಿಗಳಲ್ಲಿ ೫೬ ಮಂದಿ ಉತ್ತೀರ್ಣರಾಗಿ ಶೇ.80 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು ಹಾಜರಾದ 37 ವಿದ್ಯಾರ್ಥಿಗಳಲ್ಲಿ 30 ಮಂದಿ ಉತ್ತೀರ್ಣರಾಗಿ ಶೇ.81 ಫಲಿತಾಂಶ ಬಂದಿದೆ. ಈ ಪೈಕಿ ೫ ಮಂದಿ ಉನ್ನತ ಶ್ರೇಣಿ, 18 ಮಂದಿ ಪ್ರಥಮ ಶ್ರೇಣಿ, 5 ಮಂದಿ ದ್ವಿತೀಯ, ಒಬ್ಬ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಕ್ಷಿತಾ574, ನಿವೇದಿತಾ 551, ರಮ್ಲಾತ್ 547, ಶ್ರೇಯಾ 545 ಅತೀ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಒಟ್ಟು 33 ಮಂದಿ ವಿದ್ಯಾರ್ಥಿಗಳಲ್ಲಿ 26 ಮಂದಿ ಉತ್ತೀರ್ಣರಾಗಿ ಶೇ.78.78 ಫಲಿತಾಂಶ ಬಂದಿದೆ. ಇದರಲ್ಲಿ 4ಮಂದಿ ಉನ್ನತ ಶ್ರೇಣಿ, 11 ಮಂದಿ ಪ್ರಥಮ ಶ್ರೇಣಿ, 9 ಮಂದಿ ದ್ವಿತೀಯ, 2 ಮಂದಿ ತೃತೀಯ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ. ಪ್ರತಿಜ್ಞಾ 537 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.