ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಈಬಾರಿಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದಲ್ಲಿ ಹಾಜರಾದ ಒಟ್ಟು 245ವಿದ್ಯಾರ್ಥಿಗಳಲ್ಲಿ 197 ಮಂದಿ ಉತ್ತೀರ್ಣರಾಗಿ ಶೇ.80.40 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು ಹಾಜರಾದ 154 ವಿದ್ಯಾರ್ಥಿಗಳಲ್ಲಿ 122 ಮಂದಿ ಉತ್ತೀರ್ಣರಾಗಿ ಶೇ.79.22 ಫಲಿತಾಂಶ ಬಂದಿದೆ. ಕಾವ್ಯ 577, ಸುರಕ್ಷಾ575, ಸುಮಯ್ಯ 573, ದಕ್ಷಾ ಎಂ.ಸಾಲಿಯಾನ್569, ಹರ್ಷಿತ 543 ಅತೀ ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಒಟ್ಟು 50 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 38ಮಂದಿ ಉತ್ತೀರ್ಣರಾಗಿ ಶೇ.76.00 ಫಲಿತಾಂಶ ಬಂದಿದೆ. ಈ ಪೈಕಿ ದೀಕ್ಷಾ 568, ಲಕ್ಷ್ಮೀಶ್ರೀ 546, ಶೀಲಾವತಿ 542, ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 19 ಮಂದಿ ಪ್ರಥಮ ದರ್ಜೆ, 9 ಮಂದಿ ದ್ವಿತೀಯ, 7 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 41 ವಿದ್ಯಾರ್ಥಿಗಳಲ್ಲಿ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.90.2 ಫಲಿತಾಂಶ ಬಂದಿದೆ. ಈ ಪೈಕಿ 9 ಮಂದಿ ಉನ್ನತ ಶ್ರೇಣಿಯಲ್ಲಿ 26 ಪ್ರಥಮ, 2 ದ್ವಿತೀಯ. ಸೃಜನ ಫಡ್ಕೆ 578, ರಕ್ಷಿತಾ 567, ಸಂಧ್ಯಾ ಕೆ. 553, ಶ್ರೇಯಸ್546 ಅಂಕ ಗಳಿಸಿದ್ದಾರೆ.