ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಸೋಮಂತಡ್ಕ ಶಾಖೆಯ ಉದ್ಘಾಟನೆ

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಯ ಸೋಮಂತಡ್ಕ ಶಾಖೆಯ ಉದ್ಘಾಟನೆಯು ಜೂ.19ರಂದು ವಿ.ಜೆ.ಕಾಂಪ್ಲೆಕ್ಸ್ ನಲ್ಲಿ ಜರಗಿತು

ಶಾಖೆ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಆರ್ಥಿಕ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಗೆ ವಿಶೇಷ ಸ್ಥಾನಮಾನವಿದೆ. ಹಲವು ಶಕ್ತಿಶಾಲಿ ಸಹಕಾರಿ ಸಂಘಗಳು ಜಿಲ್ಲೆಯಲ್ಲಿ ಸ್ಥಾಪನೆಯಾಗಿದ್ದು, ಕ್ಯಾಂಪ್ಕೋ, ಉಜಿರೆಯ ರಬ್ಬರ್ ಸೊಸೈಟಿ, ಕೆ.ಎಂ.ಎಫ್.ಸಹಿತ ಅನೇಕ ಸಂಘಗಳು ಕೃಷಿಕರ ಹಿತಕಾಯಲು ಸಹಕಾರಿಯಾಗಿವೆ. ಹೊಸ ಶಾಖೆಗಳ ಆರಂಭದಿಂದ ಉದ್ಯೋಗ ಸೃಷ್ಟಿಯ ಜತೆ ಆರ್ಥಿಕ ಬಲವು ಹೆಚ್ಚುತ್ತದೆ ಎಂದು ಹೇಳಿದರು.

ಸೊಸೈಟಿ ಅಧ್ಯಕ್ಷ ಎಚ್. ಪದ್ಮ ಗೌಡ ಅಧ್ಯಕ್ಷತೆ ವಹಿಸಿದ್ದರು.
ಎಂಎಲ್ ಸಿ ಹರೀಶ್ ಕುಮಾರ್ ಪಾಲು ಪತ್ರ ಬಿಡುಗಡೆಗೊಳಿಸಿದರು. ಎಂಎಲ್ ಸಿ ಪ್ರತಾಪಸಿಂಹ ನಾಯಕ್ ಪ್ರಥಮ ಠೇವಣಿ ಪತ್ರ ವಿತರಿಸಿದರು. ಮುಂಡಾಜೆ ಸೈಂಟ್ ಮೇರಿಸ್ ಚರ್ಚ್ ನ ಧರ್ಮಗುರು ಫಾ.ವಿನೋಯ್ ಸೆಬಾಸ್ಟಿನ್ ಸಾಲಪತ್ರ ನೀಡಿದರು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ, ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಉಜಿರೆಯ ಶ್ರೀಕಾಲಬೈರವ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ತಾಲೂಕು ಅಧ್ಯಕ್ಷ ಕುಶಾಲಪ್ಪ ಗೌಡ, ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ರಂಜಿನಿ ರವಿ, ಸೋಮಂತಡ್ಕ ಬದ್ರಿಯಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ಉದ್ಯಮಿ ನಾರಾಯಣ ಗೌಡ, ರಾಜ್ಯ ಸೌಹಾರ್ದ ಸಂಘಗಳ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮುಂಡಾಜೆ ಗ್ರಾಮ ಸಮಿತಿ ಅಧ್ಯಕ್ಷ ಆನಂದ ಗೌಡ, ಕಟ್ಟಡದ ಮಾಲಕ ವಿ.ಜೆ. ಅಬ್ರಹಾಂ, ಸೊಸೈಟಿಯ ಸಿಇಒ ಧನಂಜಯ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿರ್ದೇಶಕ ಗೋಪಾಲಕೃಷ್ಣ ಬಿ. ಗುಲ್ಲೋಡಿ ಸ್ವಾಗತಿಸಿದರು. ನಿರ್ದೇಶಕ ಸುರೇಶ್ ಬಿ. ಕೌಡಂಗೆ ವಂದಿಸಿದರು.
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮೋಹನಗೌಡ ಮತ್ತು ಆನಂದ ಗೌಡ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.