ದೇಲಂಪುರಿ ಮಹಾದೇವ ಮಹಾ ಗಣಪತಿ ದೇವಸ್ಥಾನದಲ್ಲಿ ನಿಧಿ ಕುಂಭ ಪ್ರತಿಷ್ಠೆ

ವೇಣೂರು : ಜೀರ್ಣೋದ್ಧಾರಗೊಳ್ಳುತ್ತಿರುವ ವೇಣೂರು ಸನಿಹದ ಕರಿಮಣೇಲು ಶ್ರೀ‌ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ನಿಧಿ ಕುಂಭಾದಿ ಷಡಾಧಾರ ಪ್ರತಿಷ್ಠೆ  ಜೂ.19 ರಂದು ನಡೆಯಿತು. ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ಧಾರ್ಮಿಕ ಉಪನ್ಯಾಸವಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡ್ಯಾರಬೆಟ್ಟಿನ ಆಡಳಿತೆದಾರ ಎ. ಜೀವಂಧರ ಕುಮಾರ್ ವಹಿಸಿದ್ದರು. ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕರು ಕೆ. ಹರೀಶ್ ಕುಮಾರ್, ಪ್ರತಾಪ ಸಿಂಹ ನಾಯಕ್ ಭಾಗವಹಿಸಿದ್ದರು.

ವೇಣೂರು ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಾ ಡಿ., ಉದ್ಯಮಿ ಕೆ.ಭಾಸ್ಕರ ಪೈ, ಪೆರಿಂಜೆ ರಾಜ್ಯಗುತ್ತು ಪಿ.ಜಯರಾಜ ಕಂಬಳಿ, ತೀರ್ಥ ಮಂಟಪದ ದಾನಿ ಪಾಳೆಂಜ ಕರಂಬಾರಿನ ಸದಾನಂದ ಹೆಗ್ಡೆ, ವೇಣೂರು ವಲಯ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಕರಿಮಣೇಲು ಮರಾಠಿ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಾಜಗೋಪಾಲ ಭಟ್, ಚೆನ್ನೈನ ಸುಕೀರ್ತಿರಾಜ ಅಜ್ರಿ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಕೆ. ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು ಪ್ರಸ್ತಾವಿಸಿದರು. ಪ್ರಧಾನ‌ ಕಾರ್ಯದರ್ಶಿ ಸತೀಶ್ ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ವೇದಮೂರ್ತಿ ನಡ್ವಂತಾಡಿ ಉದಯ ಪಾಂಗಣ್ಣಾಯ ತಂತ್ರಿಯವರ ನೇತ್ವದಲ್ಲಿ, ಅರ್ಚಕ ಚಂದ್ರಶೇಖರ ಅಸ್ರಣ್ಣ ಅವರ ಸಹಕಾರದಲ್ಲಿ ನಿಧಿ‌ ಕುಂಭಾದಿ ಷಡಾಧಾರ ಪ್ರತಿಷ್ಠೆ ನೆರವೇರಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.