ಪುಂಜಾಲಕಟ್ಟೆ ಸಮೂಹ ಕೇಂದ್ರದ ಮೂರು ನಿವೃತ್ತ ಶಿಕ್ಷಕರಿಗೆ ಸನ್ಮಾನ 

ಪುಂಜಾಲಕಟ್ಟೆ : ವಯೋ ನಿವೃತ್ತಿ ಹೊಂದಿದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪದವೀಧರೇತರ ಮುಖ್ಯೋಪಾಧ್ಯಾಯ ಮೋನಪ್ಪ.ಕೆ., ಮಡಂತ್ಯಾರ್ ಗಾರ್ಡಿಯನ್ ಏಂಜೆಲ್ ಅನುದಾನಿತ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜೆಸಿಂತಾ ಮೆಟಿಲ್ಡಾ ಲೊಬೊ ಮತ್ತು ಸೋಣಂದೂರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಈ ಮೂರು ಶಿಕ್ಷಕರುಗಳಿಗೆ ಪುಂಜಾಲಕಟ್ಟೆ ಸಮೂಹ ಸಂಪನ್ಮೂಲ ಕೇಂದ್ರದ ಸಮಸ್ತ ಶಿಕ್ಷಕರ ಪರವಾಗಿ ಜೂ.19 ರಂದು ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕೆ. ಪಿ. ಎಸ್.ಪುಂಜಾಲಕಟ್ಟೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯರಾಮ್ ಶೆಟ್ಟಿ, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯರಾಜ್ ಜೈನ್, ಪುಂಜಾಲಕಟ್ಟೆ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಚೇತನಾ, ಮಚ್ಚಿನ ಶಾಲೆಯ ಮುಖ್ಯೋಪಾಧ್ಯಾಯ ವಿಠಲ್, ಕೆ ಪಿ ಎಸ್ ಪುಂಜಾಲಕಟ್ಟೆ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಸುರೇಶ್ ಶೆಟ್ಟಿ ಮೊದಲ‍ದವರು ಉಪಸ್ಥಿತರಿದ್ದರು.

ರಘುಪತಿ.ಕೆ ರಾವ್ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಚೇತನಾ ಸ್ವಾಗತಿಸಿ, ಸಹಶಿಕ್ಷಕ  ಕರುಣಾಕರ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.