ಇಂದಬೆಟ್ಟು: ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಅಘೋರ ಹೋಮ, ವಾಸ್ತು ಬಲಿ, ಭಾಧಾ ಉಚ್ಛಾಟನೆ

ಇಂದಬೆಟ್ಟು:  ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ನೀಲೇಶ್ವರ ಅಲಂಬಾಡಿ ವೇ.ಮೂ| ಶ್ರೀ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಕ್ಷೇತ್ರದ ಹಾಗೂ ಭಕ್ತಾದಿಗಳ ಶ್ರೇಯಾ ಅಭಿವೃದ್ಧಿಗಾಗಿ ಭಾಧಾ ಪರಿಹಾರದಂಗವಾಗಿ ಜೂ.16 ರಂದು ಅಘೋರ ಹೋಮ, ವಾಸ್ತು ಬಲಿ, ಭಾಧಾ ಉಚ್ಛಾಟನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಜೂ.17 ರಂದು 12 ತೆಂಗಿನ ಕಾಯಿ ಗಣಹೋಮ, ಸನ್ಯಾಸಿ ಮಹಾಯೋಗಿ ಪ್ರತಿಷ್ಠೆ, ಪ್ರಭಾ ಸತ್ಯಕ ಸಹಿತ ವನಶಾಸ್ತಾರ ಪ್ರತಿಷ್ಠೆ, ಮೃತ್ಯುಂಜಯ ಹೋಮ, ಮನ್ಯು ಸೂಕ್ತ ಪುರಶ್ಚರಣಾ ಹೋಮ, ದೇವರಿಗೆ ಶತ ರುದ್ರಾಭಿಷೇಕ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದುರ್ಗಾ ಪೂಜೆ, ದುರ್ಗಾ ಹೋಮ, ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ವನ್ನು ಯಶಸ್ಸಿಗೊಳಿಸಿದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಯಾಸಿ ಮಹಾಯೋಗಿ ಪ್ರತಿಷ್ಠೆ ವೇಳೆ ಸನ್ಯಾಸಿಯೊಬ್ಬರು ಕ್ಷೇತ್ರಕ್ಕೆ ಆಗಮಿಸಿದ್ದು ಭಕ್ತರಲ್ಲಿ ವಿಶೇಷ ಚೈತನ್ಯವನ್ನು ಉಂಟುಮಾಡಿತ್ತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.