ಭಾರತೀಯ ಸೈನ್ಯದ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾದ ಬೆಳ್ತಂಗಡಿಯ ಚಿರಂಜೀವಿ ಸಾತ್ತ್ವಿಕ ಕುಳಮರ್ವ ಎಂ.ಎಸ್

ಬೆಳ್ತಂಗಡಿ: ಅಮೇರಿಕದ ಅರಿಝೋನಾ ಯುನಿವರ್ಸಿಟಿಯಲ್ಲಿ ಎಂ.ಎಸ್ ಮಾಡಿ ಎರಡು ವರ್ಷಗಳ ಕಾಲ ಅಲ್ಲೇ ಉದ್ಯೋಗ ನಿರ್ವಹಿಸಿದ ಬೆಳ್ತಂಗಡಿಯ ಚಿರಂಜೀವಿ ಸಾತ್ತ್ವಿಕ ಕುಳಮರ್ವ ಎಂ.ಎಸ್ ಇವರು ಭಾರತೀಯ ಸೈನ್ಯದ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸೈನ್ಯಕ್ಕೆ ಸೇರುವ ಹಠದಿಂದ ಅಮೇರಿಕಾದಿಂದ ಭಾರತಕ್ಕೆ ಬಂದು ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಡೆಹ್ರಾಡೂನಿನಲ್ಲಿ ಒಂದು ವರ್ಷಗಳ ಕಾಲ ತರಬೇತಿ ಪಡೆದು ಇಂದು ಲೆಫ್ಟಿನೆಂಟ್ ಹುದ್ದೆಗೆ ಸೇರಿಕೊಂಡಿದ್ದಾರೆ.

ಇವರು  ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ  ಪ್ರೋ|ಗಣಪತಿ ಭಟ್ ಕುಳಮರ್ವ ಮತ್ತು ಪ್ರೋ|ವಸಂತಿ ಕುಳಮರ್ವ ಪುತ್ರ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.