ಕೊಕ್ಕಡ : ಕೊಕ್ಕಡ ಸೀಮೆ ಮಾಯಿಲಕೋಟೆ ದೈವಗಳ ಸನ್ನಿಧಿಯಲ್ಲಿ ಮೇ.11ರಿಂದ 13ರ ವರೆಗೆ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಜರುಗಿದ್ದು, ಆ ಪ್ರಯುಕ್ತ ಅಭಿನಂದನಾ ಸಮಾರಂಭವು ಮಾಯಿಲಕೋಟೆಯಲ್ಲಿ ಜೂ.12ರಂದು ಜರುಗಿತು.
ಪ್ರತಿಷ್ಟಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹಾಗೂ ಪ್ರತಿಷ್ಟಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಹರೀಶ್ ಪೂಂಜಾರವರು ಕಾರ್ಯಕ್ರಮದ ಯಶಸ್ವಿಗೆ ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಸಮಿತಿ ಪ್ರ. ಕಾರ್ಯದರ್ಶಿ ಶಾಂತಾರಾಮ ನ್ಯೂ ಆರಿಗ ಲೆಕ್ಕಪತ್ರ ನೀಡಿದರು.
ವೇದಿಕೆಯಲ್ಲಿ ಗ್ರಾ. ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ, ಡಾ.ಮೋಹನದಾಸ ಗೌಡ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಸುಳ್ಯ ಕೋಟೆಮಾಯಿಲ ಸಮುದಾಯ ಸಂಘದ ಅಧ್ಯಕ್ಷ ಕುಮಾರ್ ಬಳ್ಳಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜೀರ್ಣೋದ್ದಾರ, ಪ್ರತಿಷ್ಟಾ ಮಹೋತ್ಸವ ಸಮಿತಿ, ವಿವಿಧ ಸಮಿತಿ ಗಳ ಸಂಚಾಲಕರು ಹಾಗೂ ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುರೇಶ್ ಪಡಿಪಂಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಉಪಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಧನ್ಯವಾದವಿತ್ತರು.