ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನೇತೃತ್ವದಲ್ಲಿ ನಡೆದ ಸಿಇಟಿ, ನೀಟ್ ತರಬೇತಿ ಸಮಾರೋಪ

ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನೇತತ್ವದಲ್ಲಿ, ಬಿಲ್ಲವ ಮಹಿಳಾ ವೇದಿಕೆ ಮತ್ತು ತಾಲ್ಲೂಕು ಯುವ ಬಿಲ್ಲವ ವೇದಿಕೆ ಇವುಗಳ ಸಹಭಾಗಿತ್ವದಲ್ಲಿ ಮೇ 20 ರಿಂದ 17 ದಿನಗಳಲ್ಲಿ ನಡೆದ ಸಿಇಟಿ ಮತ್ತು ನೀಟ್ ಪರೀಕ್ಷೆಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜೂ. 12 ರಂದು ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಮಾಜಿ ಶಾಸಕ , ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಗೌರವಧ್ಯಕ್ಷ ಕೆ. ವಸಂತ ಬಂಗೇರ ಭಾಗವಹಿಸಿ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉನ್ನತ ಶಿಕ್ಷಣಕ್ಕೆ ಪೂರಕ ವಾಗಲಿ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ವಹಿಸಿದ್ದರು. ಸಂಘದ, ಶೈಕ್ಷಣಿಕ ಸಮಿತಿ ಸಂಚಾಲಕ ನಿವೃತ್ತ ಶಿಕ್ಷಕ ಲಕ್ಷ್ಮಣ ಪೂಜಾರಿ,  ಹಿರಿಯ ಉಪನ್ಯಾಸಕ ಉಪಸ್ಥಿತರಿದ್ದರು. ಗುಣಪ್ರಸಾದ್, ಗುರುದೇವ ಪಿ ಯು. ಕಾಲೇಜು , ಪ್ರಾಂಶುಪಾಲ ಸುಕೇಶ್ ಕುಮಾರ್ .ಕಾಲೇಜಿನ ಉಪನ್ಯಾಸಕರುಗಳಾದ ಶ್ರುತಿ, ಮಾಯಾ ಭಟ್, ಲತಾ ಕೋಟ್ಯಾನ್, ಸಿಬ್ಬಂದಿ ನ. ಪ. ಸದಸ್ಯ ಜನಾರ್ಧನ, ಸಹಕರಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.