ಬೆಳ್ತಂಗಡಿ: ಇಲ್ಲಿಯ ಕುತ್ಯಾರು ನಿವಾಸಿ ದಿ. ವಾಸುದೇವ ಭಟ್ ಕುತ್ಯಾರು ಇವರ ಪುತ್ರ ಕೆ. ಲಕ್ಷ್ಮೀನಾರಾಯಣ ಭಟ್ ( ೭೬ವ) ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.೮ರಂದು ನಿಧನರಾದರು.
ಇವರು ಕುತ್ಯಾರು ದೇವಸ್ಥಾನದಲ್ಲಿ ಅರ್ಚಕರಾಗಿ, ಕದ್ರಿ, ಉಡುಪಿ, ಶರಾವು, ಕಡೆಶೀವಾಲಯ ಹಾಗೂ ನಾಳ ದೇವಸ್ಥಾನಗಳಲ್ಲಿ ಬ್ರಹ್ಮವಾಹಕರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಪುರೋಹಿತರಾಗಿ, ಜ್ಯೋತಿಷಿಯಾಗಿ ಜನಮನ್ನಣೆಗೆ ಪಾತ್ರರಾಗಿದ್ದರು. ಮೃತರು ಪತ್ನಿ ಸರಸ್ವತಿ, ಪುತ್ರರಾದ ಶ್ರೀಕಾಂತ್, ರಾಜೇಶ್, ಪುತ್ರಿ ಶ್ರೀಲತಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.