ಧರ್ಮಸ್ಧಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ಧರ್ಮಸ್ಧಳ ಘಟಕದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ಮೂರು ಮಂದಿ ಮೇ.31ರಂದು ನಿವೃತ್ತರಾದರು. ಈ ಘಟಕದಲ್ಲಿ ತಾಂತ್ರಿಕ ಸಿಬ್ಬಂದಿ ಕುಶಲಕರ್ಮಿಯಾಗಿ 37 ವರ್ಷ ಸೇವೆ ಸಲ್ಲಿಸಿದ್ದ ಉಜಿರೆಯ ವೆಂಕಟ್ರಮಣ ಶೆಟ್ಟಿ
ಚಾಲಕರಾಗಿ, ಚಾಲಕ ಭೋದಕರಾಗಿ ೩೫ ವರ್ಷ ಸೇವೆ ಸಲ್ಲಿಸಿದ್ದ ಉಜಿರೆಯ ಎಸ್.ಉಮೇಶ್ ಚಾಲಕರಾಗಿ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಎಸ್.ಎಂ ಹೊನ್ನಯ್ಯ ಇವರುಗಳು ನಿವೃತ್ತರಾದರು. ಇವರಿಗೆ ಮೇ.31ರಂದು ಧರ್ಮಸ್ಧಳ ಘಟಕದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.