ಧರ್ಮಸ್ಥಳ :ಉಜಿರೆ ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮರ ನಿಧನದ ಬಗ್ಗೆ ಮಹೋತ್ಸವ ಸಭಾ ಭವನದಲ್ಲಿ ಮೇ.24 ರಂದು ಶ್ರದ್ಧಾಂಜಲಿ ಅರ್ಪಿಸಲಾಯಿತು.
ಡಿ. ವೀರೇಂದ್ರ ಹೆಗ್ಗಡೆಯವರ ಆತ್ಮ ಕಾರ್ಯದರ್ಶಿ ಎ. ವಿ. ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಲ್ಪಡಿತ್ತಾಯ ಮತ್ತು ತೋಟಗಾರಿಕೆ ವಿಭಾಗದ ಮುಖ್ಯಸ್ಥ ಬಿ. ಬಾಲಕೃಷ್ಣ ಪೂಜಾರಿ ಮಾತನಾಡಿ ಯಶೋವರ್ಮರ ಸರಳ, ದಕ್ಷ ಆಡಳಿತ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ದೇವಳದ ಪಾರುಪತ್ಯದರ ಲಕ್ಷ್ಮಿನಾರಾಯಣ ರಾವ್, ಪ್ರಧಾನ ಅರ್ಚಕ ಈಶ್ವರ ಪರ್ಲತ್ತಾಯ, ಅನ್ನಪೂರ್ಣ ಛತ್ರದ ಸುಬ್ರಹ್ಮಣ್ಯ ಪ್ರಸಾದ್, ಶುಭಚಂದ್ರರಾಜ ಮತ್ತು ಎಲ್ಲಾ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು