ಕೊಕ್ಕಡದ ಮುಸ್ಲಿಂ ಯುವಕ ಬೆಂಗಳೂರಿನ ಹಿಂದೂ ಯುವತಿ :ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮದುವೆಯ ದೃಢಪತ್ರ

ಬೆಳ್ತಂಗಡಿ: ಕೊಕ್ಕಡದ ಮುಸ್ಲಿಂ ಸಮುದಾಯದ ಆಟೋ ಚಾಲಕನೋರ್ವ ಬೆಂಗಳೂರಿನ ಯುವತಿಯೋರ್ವಳನ್ನು ರಿಜಿಸ್ಟರ್ ಮದುವೆಯಾಗಿರುವುದಾಗಿ ಅವರ ಪೋಟೋ ಸಹಿತ ಮದುವೆ ದೃಢಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಯುವತಿಯ ಜೊತೆ ಆಟೋ ಚಾಲಕ ಸಮೀರ್ ಎಂಬಾತನ ಪರಿಚಯವಾಗಿ ನಂತರ ಅವರಿಬ್ಬರು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ರಿಜಿಸ್ಟರ್ ಮದುವೆಯಾಗಿರುವುದಾಗಿ ಅವರಿಬ್ಬರ ಪೋಟೋ ಸಹಿತ ಮದುವೆ ದೃಢಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನ್ಯಕೋಮಿನ ಯುವಕ ಹಿಂದೂ ಯುವತಿಯ ಜೊತೆ ಆಕೆಯನ್ನು ವಿವಾಹವಾಗಿರುವ ವಿಷಯ ಕೊಕ್ಕಡದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.