ಕಳಿಯ ಗ್ರಾಮದ ನಿವಾಸಿ ಎನ್. ನಾರಾಯಣ ಆಚಾರ್ಯ ನಿಧನ

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ “ಶ್ರೀ ದೇವಿ ಕೃಪಾ” ನಿವಾಸಿ ಎನ್.ನಾರಾಯಣ ಆಚಾರ್ಯ (82 ವರ್ಷ) ಮೇ. 26 ರಂದು ಅಲ್ಪಕಾಲದ ಅಸೌಖ್ಯದಿಂದ  ಸ್ವಗೃಹದಲ್ಲಿ ನಿಧನರಾದರು.
ಮೃತರು ವೃತ್ತಿಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಪದಾಧಿಕಾರಿಯಾಗಿ, ಯಕ್ಷಗಾನ ತಾಳಮದ್ದಳೆ, ಶೈಕ್ಷಣಿಕ, ಧಾರ್ಮಿಕ ಮತ್ತು ಭಜನಾ ಮಂಡಳಿ ಹಿರಿಯ ಮಾಜಿ ಅಧ್ಯಕ್ಷರಾಗಿ, ಸದಸ್ಯರಾಗಿ, ಕಳಿಯ ಗ್ರಾಮ ಪಂಚಾಯತು ಸದಸ್ಯರಾಗಿ , ತಾಲೂಕಿನ ಭಜನಾ ಮಂಡಳಿ ವಲಯ ಸಮಿತಿ ಅಧ್ಯಕ್ಷರಾಗಿ, ಜನಜಾಗೃತಿ ವೇದಿಕೆಯ ಪದಾಧಿಕಾರಿಯಾಗಿ, ಯಕ್ಷಗಾನ ವೇಷಧಾರಿಯಾಗಿ, ತುಳು ಸಾಮಾಜಿಕ ನಾಟಕದ ಸ್ರೀ ವೇಷಧಾರಿಯಲ್ಲಿ ಹೆಸರು ಗಳಿಸಿದರು. ಸಮಾಜದಲ್ಲಿ ಸ್ನೇಹ ಜೀವನ ನಡೆಸುತ್ತಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು ಹಾಗೂ ನಾಳ ದುರ್ಗಾಪರಮೇಶ್ವರಿ ದೇವರ ಪರಮ ಭಕ್ತರಾಗಿದ್ದರು.
ಮೃತರ ಪತ್ನಿ ಲೀಲಾವತಿ, ಮೂವರು ಪುತ್ರರಾದ ಯೋಗೀಶ್ ಕುಮಾರ್ ಯನ್, ಸತೀಶ್ ಕುಮಾರ್ ಯನ್, ಲೋಕೇಶ್ ಕುಮಾರ್ ಯನ್, ಓರ್ವ ಪುತ್ರಿ ಉಷಾ ಯನ್ ಹಾಗೂ ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ವಿವಿಧ ಸಂಘದ- ಸಂಸ್ಥೆಯ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.