ಕೊಯ್ಯೂರು: 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕೋಡ್ಯೆಲ್ ಗೀತಾ ರಾಮಣ್ಣ ಗೌಡರ ಪುತ್ರಿ ಬೆಳ್ತಂಗಡಿ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಮಧುಶ್ರೀ ಹಾಗೂ ಸರಕಾರಿ ಪ್ರೌಢಶಾಲೆ ಕೊಯ್ಯೂರಲ್ಲಿ 625ರಲ್ಲಿ 616 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ನಡದ ಬಾಗಿಲು ವಿನೋದ ಮತ್ತು ಪುರಂದರ ಗೌಡ ದಂಪತಿ ಪುತ್ರ ಪುನೀತ್, ಮತ್ತು 625 ರಲ್ಲಿ 614 ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದ ಅತ್ತಿಮಾರ್ ಸರಸ್ವತಿ ಮತ್ತು ನೋಣಯ್ಯ ಗೌಡರ ಮಗ ಚರಣ್ ಕುಮಾರ ಇವರನ್ನು ಮೇ.20 ಮತ್ತು 21 ರಂದು ಅವರವರ ಮನೆಯಲ್ಲಿ ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸಂಘದ ವತಿಯಿಂದ ಶಾಲು, ಹಾರ ಮತ್ತು ಫಲವಸ್ತುಗಳನ್ನು ನೀಡಿ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ನವೀನ್ ಗೌಡ ವಾದ್ಯಕೋಡಿ, ಕಾರ್ಯದರ್ಶಿ ಕೇಶವ ಗೌಡ ಕಂಗಿತ್ತಿಲು, ಗೌರವಾಧ್ಯಕ್ಷ ನಾರಾಯಣ ಗೌಡ ಮೈಂದಕೋಡಿ, ತಾ. ಸಂಘದ ನಿರ್ದೇಶಕ ರವೀಂದ್ರನಾಥ ಪೆರ್ಮುದೆ, ಗ್ರಾಂ. ಪಂ. ಮಾಜಿ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ, ಕೊಯ್ಯೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಜ್ವಲ್ ಕುಮಾರ್ ಪಾಂಬೇಲು, ಅಧ್ಯಾಪಕರಾದ ವಿಜಯ್ ಕುಮಾರ್ ಎಂ. ಸಮೃದ್ಧಿ ನಿಲಯ, ವಿಶ್ವನಾಥ ಗೌಡ ಉಗ್ರೋಡಿ, ಉಪನ್ಯಾಸಕ ಮೋಹನ ಗೌಡ ಭಂಡಾರಿಕೋಡಿ, ತಾ. ಪಂ. ಮಾಜಿ ಸದಸ್ಯ ಪ್ರವೀಣ್ ಗೌಡ ಮಾವಿನಕಟ್ಟೆ, ಉದ್ಯಮಿ ಚಂದಪ್ಪ ಗೌಡ ಬೆರ್ಕೆ, ಗ್ರಾ. ಪಂ. ಸದಸ್ಯ ಯಶವಂತ ಗೌಡ ಪೂರ್ಯಾಲ, ತಿಮ್ಮಯ್ಯ ಗೌಡ ಸಾದೂರು, ವಕೀಲರಾದ ಸುಜಿತ್ ಗೌಡ ಉಗ್ರೋಡಿ, ಬೆಂಗಳೂರು, ದಿನೇಶ್ ಗೌಡ ಜಾಲ್ನಾಪು, ದಿವ ಕೊಕ್ಕಡ ಲೋಕಯ್ಯ ಗೌಡ ಕಂಗಿತ್ತಿಲು ಮೊದಲಾದವರು ಭಾಗವಹಿಸಿದ್ದರು.