ಕುವೆಟ್ಟು : ಜಲಜೀವನ ಮಿಷನ್ ಜಿಲ್ಲಾ ಪಂಚಾಯತ್ ಮಂಗಳೂರು , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ , ಗ್ರಾಮ ಪಂಚಾಯತ್ ಕುವೆಟ್ಟು ಇವರ ಸಹಭಾಗಿತ್ವದಲ್ಲಿ ಸಮುದಾಯ ಸಂಸ್ಥೆ ಮಂಗಳೂರು ಇವರ ಸಂಯೋಜನೆಯಲ್ಲಿ ಜಲ ಜೀವನ್ ಮಿಷನ್ ಇದರ ಮಾಹಿತಿ ಶಿಕ್ಷಣ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ ವಿಭಾಗದ ಜಲಜೀವನ್ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ವಠಾರದಲ್ಲಿ ಆಯೋಜಿಸಲಾಯಿತು.
ಮಂಗಳೂರಿನ ಪಿಂಗರ ಕಲಾ ತಂಡದ ಭರತ್ ಕರ್ಕೇರ ಮತ್ತು ತಂಡದವರು ಕಾರ್ಯಕ್ರಮ ಸಯೋಜಿಸಿದರು . ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ ರವರು ದೀಪ ಬೆಳಗಿಸಿ ಉದ್ಘಾಟಿಸಿ, ನೀರು ನೈರ್ಮಲ್ಯ ಪ್ರತಿಯೊಬ್ಬರ ಆದ್ಯತೆಯಾಗಬೇಕೆಂದು ಶುಭ ಹಾರೈಸಿದರು, ಗ್ರಾಮ ಪಂಚಾಯತ್ ಸದಸ್ಯರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶ್ರೀಮತಿ ಗೀತಾ, ಕಾರ್ಯದರ್ಶಿ ಶ್ರೀಮತಿ ಸೇವಂತಿ, ಜಲ ಜೀವನ್ ಮಿಷನ್ ನ ಜಿಲ್ಲಾ ಮಾಹಿತಿ ಶಿಕ್ಷಣ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಶಿವರಾಮ್ ಪಿ ಬಿ, ಜಿ.ಪಂ.ನ ಜೀಯೋಲಾಜಿಸ್ಟ್ ನಾಗಲಿಂಗ ಸ್ವಾಮಿ , ಶಾಲಾ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕ ವೃಂದದವರು ಹಾಗೂ ಪಂಚಾಯತ್ ಸಿಬ್ಬಂದಿಗಳು ಆಶಾ ಕಾರ್ಯಕರ್ತರು ಅಂಗನವಾಡಿ, ಶಾಲಾ ವಿದ್ಯಾರ್ಥಿಗಳು ಇಲಾಖಾ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದು ಮಾಹಿತಿ ಪಡೆದರು. ಕುವೆಟ್ಟು ಪಂಚಾಯತ್ ಸಿಬ್ಬಂದಿ ಆನಂದ್ ಕೋಟ್ಯಾನ್ ಕಾರ್ಯಕ್ರಮ ಸಂಘಟಿಸಿ ವಂದಿಸಿದರು.