ಮಚ್ಚಿನ: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷರು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ ಇವರು ಮೇ.25ರಂದು ಮಚ್ಚಿನ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹರಿಣಾಕ್ಷಿ ಮತ್ತು ಶಿವಪ್ಪ ಪೂಜಾರಿಗಳ ಮಗನಾದ ರೋಶನ್ ಮನೆಗೆ ಭೇಟಿಕೊಟ್ಟು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲ್ಲೂಕು ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಶೇಖರ ಬಂಗೇರ, ಸಂಘದ ಮಾಜಿ ಅಧ್ಯಕ್ಷ ಜಯರಾಮ ಬಂಗೇರ, ಸತೀಶ ಕುಮಾರ್ ಬೆಳ್ಳಿಬೈಲು, ನಾರಾಯಣ ಮಚ್ಚಿನ, ಸಂತೋಷ್ ಕುಮಾರ್ ಮೆಚ್ಚಿನ, ಸಂಗೀತ ಪಿ.ಹೆರಾಜೆ ಮುಂತಾದವರು ಭಾಗಿಯಾಗಿದ್ದರು.