ಉಜಿರೆ: ಬ್ಯಾಂಕುಗಳು ಮುಖ್ಯವಾಗಿ ಜನರಿಂದ ಉಳಿತಾಯದ ಹಣವನ್ನು ಸಂಗ್ರಹಿಸಿ,ಅವಶ್ಯ ವಿರುವವರಿಗೆ ಸಾಲಗಳನ್ನು ನೀಡುತ್ತವೆ.ಠೇವಣೆದಾರರಿಗೆ ಬ್ಯಾಂಕುಗಳು ಬಡ್ದಿಯನ್ನು ನೀಡಬೇಕಾಗಿರುವುದರಿಂದ ಅವರು ಸಾಲ ಕೊಟ್ಟು ಲಾಭವನ್ನು ಗಳಿಸಬೇಕು. ಎಂದು ಅಮೂಲ್ಯ ಸಾಕ್ಷರತಾ ಕೇಂದ್ರ ಹಾಗೂ ಕೆನರಾ ಬ್ಯಾಂಕಿನ ಪ್ರಾಯೋಜಿತ ಕಾರ್ಯಕ್ರಮದ ಸಂಪನ್ಮೂಲ ಅಧಿಕಾರಿಯಾಗಿರುವ ಉಷಾ ಕಾಮತ್ ಇವರು ಎಸ್. ಡಿ.ಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬ್ಯಾಂಕಿನ ವಿವಿಧ ಠೇವಣಿಗಳ ಬಗ್ಗೆ ಹಾಗೂ ದೊರೆಯುವ ಸಾಲಗಳು ಮತ್ತು ಅದನ್ನು ಪಡೆಯಲು ಪಾಲಿಸಬೇಕಾದ ಮಾರ್ಗಸೂಚಿಗಳು, ದೊರೆಯುವ ವಿನಾಯಿತಿ ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಬ್ಯಾಂಕ್ ಗಳ ಪಾತ್ರ, ಸೈಬರ್ ಸೆಕ್ಯೂರಿಟಿ ಮುಂತಾದ ಅನೇಕ ವಿಷಯಗಳ ಜೊತೆಗೆ ಬ್ಯಾಂಕ್ ನ ಕಾರ್ಯ ಚಟುವಟಿಕೆಗಳ ಕುರಿತು ಎಲ್.ಸಿ.ಡಿ ಪ್ರೊಜೆಕ್ಟರ್ ನಲ್ಲಿ ಪಿ.ಪಿ.ಟಿ ಮೂಲಕ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ವಿ ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಕು. ಕೀರ್ತನಾ ಈ ಕಾರ್ಯಕ್ರಮವನ್ನು ನಿರೂಪಿಸಿ, ಎಲ್ಲರನ್ನೂ ಗೌರವದಿಂದ ಸ್ವಾಗತಿಸಿ ಕೊನೇಗೆ ವಂದಿಸಿದರು.