ಆರಂಬೋಡಿ: ಬಿಜೆಪಿ ಆರಂಬೋಡಿ ಶಕ್ತಿಕೇಂದ್ರದ ವತಿಯಿಂದ, 2021-22ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ, ಆರಂಬೋಡಿ ಗ್ರಾಮದ ಸಾನ್ವಿ ಶೆಟ್ಟಿ ಪಿಲಿಕಜೆ(606 ಅಂಕ) ಮತ್ತು ನಿಧಿ ಶೆಟ್ಟಿ ಪೂಂಜ(600 ಅಂಕ) ಇವರಿಬ್ಬರನ್ನು ಸನ್ಮಾನಿಸಲಾಯಿತು.
ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ರಮೇಶ್ ಕುಂಜಾಡಿ ಇವರು ಸಾಧಕರನ್ನು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸುರೇಂದ್ರ ಶೆಟ್ಟಿ ಅಜ್ಜಾಡಿ, ಮಾಜಿ ಸದಸ್ಯ ನೋಣಯ್ಯ ಶೆಟ್ಟಿ ಕೊಡೇಲು, ಪೂಂಜ ಬೂತ್ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಉಮನೊಟ್ಟು, ಕಾರ್ಯದರ್ಶಿ ಗಣೇಶ್ ಶೆಟ್ಟಿಗಾರ್, ಆರಂಬೋಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಯಶವಂತಿ ಶೆಟ್ಟಿಗಾರ್, ಪ್ರಮುಖರಾದ ರಮೇಶ್ ಪೂಜಾರಿ ಕುಂಜಾಡಿ, ಉಮೇಶ್ ಶೆಟ್ಟಿ ಪಾಲ್ಯ, ರಾಧಾಕೃಷ್ಣ ಶೆಟ್ಟಿ ಉಗ್ರೋಡಿ, ಉದ್ಯಮಿ ಸಚಿನ್ ಶೆಟ್ಟಿ ಹಕ್ಕೇರಿ, ನಂದಕುಮಾರ್ ಪೂಂಜ ಉಪಸ್ಥಿತರಿದ್ದರು.