ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ಪೊಲೀಸರಿಗೆ ದೂರು

ಬೆಳ್ತಂಗಡಿ:  ಶ್ರೀ ಗುರುದೇವ ಕಾಲೇಜು ಬೆಳ್ತಂಗಡಿ ಇದರ ನೇತೃತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನರ್ಪ ಕೋಡಿಯಾಲ್‌ಬೈಲು ಇಲ್ಲಿ ನಡೆದ ಎನ್ಎಸ್ಸೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಪರಿಸರದಲ್ಲಿರುವ ವಿವಿಧ ಧರ್ಮದ ಧಾರ್ಮಿಕ ಶ್ರದ್ದಾಕೇಂದ್ರಗಳಿಗೆ ಭೇಟಿ ನೀಡಲಾಗಿರುವುದನ್ನು ಧರ್ಮದ ದೃಷ್ಟಿಯಿಂದ ಬೇರ್ಪಡಿಸಿ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗುರುದೇವ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ|ಸವಿತಾ ರವರು  ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗರುಡ ಹಿಂದೂ ಫೇಸ್ ಬುಕ್ ಖಾತೆ ಎಂಬ  ಸಾಮಾಜಿಕ ಜಾಲತಾಣವಾದಲ್ಲಿ ಶಿಬಿರಾರ್ಥಿಗಳು ಸ್ಥಳೀಯ ಪ್ರಾರ್ಥನಾಲಯಗಳಿಗೆ ಭೇಟಿ ನೀಡಿ ಅದರ ಆವರಣದ ಮುಂದೆ ನಿಂತು ತೆಗೆದುಕೊಂಡಿರುವ ಭಾವಚಿತ್ರವನ್ನು ಬಳಸಿಕೊಂಡು ಶ್ರೀ ಗುರುದೇವ ಕಾಲೇಜಿನ ಬಗ್ಗೆ ಅಪಪ್ರಚಾರ ಮಾಡಲಾಗಿದೆ.   ಶ್ರೀ ಗುರುದೇವ ಕಾಲೇಜಿನ ಬಗ್ಗೆ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಅಪಪ್ರಚಾರ ಮಾಡಲಾಗಿದೆ.  ಸಂಸ್ಥೆಯ ಅಧ್ಯಕ್ಷ ಹಾಗೂ ನಮ್ಮ ಕಾಲೇಜಿನ ತೇಜೋವರೆಗೆ ಯತ್ನಿಸಲಾಗಿದೆ.  ಸಂದೇಶವನ್ನು ಹರಿಯಬಿಡಲಾಗಿದ್ದು ‘ಗರುಡ ಹಿಂದೂ’ ಫೇಸ್‌ಬುಕ್ ಖಾತೆಯ ಮೂಲವನ್ನು ಪತ್ತೆಹಚ್ಚಿ ಖಾತೆ ನಿರ್ವಾಹಕನ ( ಪೇಜ್ ಅಡ್ಡಿನ್ ) ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ‌ ಒತ್ತಾಯಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.