ಶಿಶಿಲ: ಶಿಶಿಲದ ಕಪಿಲಾ ನದಿಗೆ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮವೇ ನಡೆದಿತ್ತು. ಶ್ರದ್ಧೆಯಿಂದ ಕಪಿಲಾ ನದಿಯಲ್ಲಿ ಸಾವಿರಾರು ವರ್ಷಗಳಿಂದ ಪೂಜಿಸುತ್ತಿದ್ದ ಮತ್ಸ್ಯಗಳು ನಾಶವಾಗಿ ಇಂದಿಗೆ 26 ವರ್ಷ ಕಳೆದಿದೆ. ಇಂದು ಅಲ್ಲಿಯ ಭಕ್ತರು ಮತ್ಸ್ಯ ದುರಂತ ದಿನ ಎಂದು ಕರೆಯುತ್ತಾರೆ.
ಮಡಿದ ಮೀನುಗಳಿಗೆ ಸದ್ಗತಿ ದೊರಕಲಿ. ಮಡಿದ ಮತ್ಸ್ಯಗಳು ಮತ್ತೆ ಕಪಿಲೆಯಲ್ಲಿ ಜನಿಸಲಿ ಎಂಬುದೇ ಅಲ್ಲಿಯ ಭಕ್ತರ ಪ್ರಾರ್ಥನೆ.