ಉಜಿರೆ:ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮರವರ ಪಾರ್ಥೀವ ಶರೀರವು ಬೆಂಗಳೂರಿನಿಂದ ಮೇ.24 ರಂದು ಚಾರ್ಮಾಡಿಗೆ ತಲುಪಿದ್ದು.
ಚಾರ್ಮಾಡಿಯಿಂದ ವಾಹನ ಜಾಥದ ಮೂಲಕ ಉಜಿರೆಗೆ ತಲುಪುತ್ತಿದ್ದಂತೆ ಉಜಿರೆಯಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಅತ್ಯಂತ ದೊಡ್ಡ ಮಟ್ಟದಲ್ಲಿ ಪುಷ್ಪಾರ್ಚನೆಯ ಮೂಲಕ ಗೌರವಿಸಲಾಯಿತು.
ನಂತರ ಉಜಿರೆಯಿಂದ ಪಾದಯಾತ್ರೆಯ ಮೂಲಕ ಕಾಲೇಜಿನ ಆವರಣಕ್ಕೆ ಅತ್ಯಂತ ದೊಡ್ಡ ಮಟ್ಟದಲ್ಲಿ ಪುಷ್ಪಾರ್ಚನೆಯ ಮೂಲಕ ಗೌರವಯುತವಾಗಿ ಕರೆತರಲಾಗುತ್ತಿದೆ. ಅಲ್ಲದೆ ಕಾಲೇಜಿನ ವಿದ್ಯಾರ್ಥಿಗಳು ಪುಷ್ಪ ಮಾಲೆಗಳನ್ನು ಹಾಕಿ ಗೌರವ ಸಲ್ಲಿಸಿದರು.
ಕಾಲೇಜಿನ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ,ಅಂತಿಮ ದರ್ಶನದ ನಂತರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಯಲಿದೆ.
ಮೃತರ ಗೌರವಾರ್ಥ ಪ್ರೊಫೆಸರ್ ಯಶೋವರ್ಮರವರ ಅಂತಿಮ ದರ್ಶನ ಪಡೆಯಲು ಇಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉಜಿರೆ ಪೇಟೆಯ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಸ್ಥಗಿತಗೊಳಿಸಲಾಗಿದೆ.
ಈ ವೇಳೆ ಹಲವಾರು ಗಣ್ಯರು ಭಾಗಿಯಾಗಿದ್ದಾರೆ.