ಬೆಳ್ತಂಗಡಿ: ಈ ಹಿಂದಿನ ನೆರೆಪೀಡಿತ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳ ರಚನೆ – ನೋಡೆಲ್ ಅಧಿಕಾರಿಗಳ ನೇಮಕ

ಬೆಳ್ತಂಗಡಿ: 2022-23ನೇ ಸಾಲಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗುವ ಸೂಚನೆಯಿದ್ದು, ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಹೆಚ್ಚಿನ ಮಳೆಯಾಗುವ ಸಾಧ್ಯಗಳಿರುವುದರಿಂದ ಈ ಹಿಂದಿನ ನೆರೆ ಪೀಡಿತ ಗ್ರಾಮಗಳಲ್ಲಿ ಕಾಳಜಿ ಕೇಂದ್ರವನ್ನು ರಚಿಸಲಾಗಿದ್ದು, ಜನರು ಕೂಡಲೇ ಕಾಳಜಿ ಕೇಂದ್ರಗಳಿಗೆ ತೆರಳುವಂತೆ ತಾಲೂಕು ತಹಶೀಲ್ದಾರ್ ಸೂಚನೆ ನೀಡಿದ್ದಾರೆ.

ಈ ಕಾಳಜಿ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು, ಜನರು ಈ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಮಿತ್ತಬಾಗಿಲು ಗ್ರಾಮದ ಗಣೇಶ್ ನಗರಕ್ಕೆ ದ.ಕ ಸ.ಹಿ.ಪ್ರಾ ಶಾಲೆ ಮಿತ್ತಬಾಗಿಲು ಕಾಳಜಿ ಕೇಂದ್ರವಾಗಿದೆ. ನೋಡೆಲ್ ಅಧಿಕಾರಿ- ಹರ್ಷಿತ್ ಎ.ಇ ಪಂಚಾಯತ್‌ರಾಜ್ ಉಪ ವಿಭಾಗ ಬೆಳ್ತಂಗಡಿ ಮೊ-9880862433. ಕಡಿರುದ್ಯಾವರ ಗ್ರಾಮದ ಬೊಳ್ಳೂರುಬೈಲು, ಉದ್ಧಾರ, ಕೊಯಮಜಲು, ನೂಜಿಗೆ ದ.ಕ ಜಿ.ಪ. ಹಿ.ಪ್ರಾ ಶಾಲೆ ಕೊಡಿಯಾಬೈಲು ಕಾಳಜಿ ಕೇಂದ್ರವಾಗಿದೆ. ನೋಡೆಲ್ ಅಧಿಕಾರಿ- ಫಿಲೋಮಿನಾ ಮುಖ್ಯೋಪಾಧ್ಯಾಯರು ಕಡಿರುದ್ಯಾವರ ಕಾನರ್ಪ ಮೊ-9739719705.

ಮಲವಂತಿಗೆ ಗ್ರಾಮದ ಮಕ್ಕಿ, ಪರ್ಲ, ಇಳಿಯೂರುಕಂಡ, ಎಳನೀರು ಪ್ರದೇಶ್ಕೆಕ ದ.ಕ.ಜಿ.ಪ ಕಿ.ಪ್ರಾ ಶಾಲೆ ಕಜಕ್ಕೆ ಮಲಂತಿಗೆ ಕಾಳಜಿಕೇಂದ್ರವಾಗಿದೆ. ನೋಡೆಲ್ ಅದಿಕಾರಿ ಕುಮಾರಸ್ವಾಮಿ ಮುಖ್ಯೋಪಾಧ್ಯಯರು ಮಲವಂತಿಗೆ ಕಜಕ್ಕೆ ಒಬ್ಳ್-997274774,  ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರಕ್ಕೆ ದ.ಕ ಜಿ.ಪ ಕಿ.ಪ್ರಾ ಶಾಲೆ ಕಜಕ್ಕೆ ಮಲಂವತಿಗೆ ಕಾಳಜಿ ಕೇಂದ್ರವಾಗಿದೆ.

ನೋಡೆಲ್ ಅಧಿಕಾರಿ-ಕಿಶೋರ್ ಮುಖ್ಯೋಪಾಧ್ಯಾಯರು ದೇವನಾರಿ ಶಾಲೆ ಇಂದಬೆಟ್ಟು ಮೊ-7259547798. ಚಾರ್ಮಾಡಿ ಗ್ರಾಮದ ಹೊಸ್ಮಠ, ಕೊಳಂಬೆ, ಪರ್ಲಾಣಿ, ಜೌಟಾಜೆ, ಅಂತರ ಮತ್ತು ಚಿಬಿದ್ರೆ ಗ್ರಾಮದ ಚಿಬಿದ್ರೆ ಪ್ರದೇಶಕ್ಕೆ ದ.ಕ.ಜಿ.ಪ ಹಿ.ಪ್ರಾ ಶಾಲೆ ಚಾರ್ಮಾಡಿ ಕಾಳಜಿ ಕೇಂದ್ರವಾಗಿದೆ. ನೋಡೆಲ್- ಶಿವಪ್ರಸಾದ ಅಜಿಲ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ಮೊ-9448153223

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.