ಬೆಳ್ತಂಗಡಿ ನೂತನ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಸ್ವಾಗತ

ಬೆಳ್ತಂಗಡಿ: ಬೆಳ್ತಂಗಡಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾಗಿ ಚಿತ್ರದುರ್ಗದಿಂದ ವರ್ಗಾವಣೆಯಾಗಿ ಬಂದಿರುವ ದೇವರಾಜ್ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ವರ್ಗಾವಣೆಗೊಂಡು ಬಂದಿರುವ ಸಂದೇಶ್ ರವರಿಗೆ ಬೆಳ್ತಂಗಡಿ ತಾಲುಕು ವಕೀಲರತ ಸಂಘದಿಂದ ಸ್ವಾಗತ ಕಾರ್ಯಕ್ರಮ ಮೇ 23 ರಂದು ವಕೀಲರ ಭವನದಲ್ಲಿ ನಡೆಯಿತು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್ ಅಧ್ಯಕ್ಷತೆ ವಹಿಸಿದ್ದರು.

ವಕೀಲ ವೈ ರಾಧಕೃಷ್ಣ ಮಾತನಾಡಿ ಶುಭಹಾರೈಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಗಣೇಶ್ ಗೌಡ ಉಪಸ್ಥಿತರಿದ್ದರು.

ಕಾರ್ಯದರ್ಶಿ ಶೈಲೇಶ್ ಆರ್ ಥೋಸರ್ ಸ್ವಾಗತಿಸಿ, ಕೋಶಾಧಿಕಾರಿ ಹರಿಪ್ರಕಾಶ್ ಪಿ ಎನ್ ವಂದಿಸಿದರು.ಮಾಜಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಇಳಂತಿಲ ಕಾರ್ಯಕ್ರಮ ನಿರೂಪಿಸಿದರು, ಸಂಘದ ನಿಕಟಪೂರ್ವ ಅಧ್ಯಕ್ಷ ಎಲೋಸಿಯಾಸ್ ಲೋಬೋ, ನಿಕಟ ಪೂರ್ವ ಕಾರ್ಯದರ್ಶಿ ಶ್ರೀ ಕೃಷ್ಣ ಶೇಣೈ, ಹಿರಿಯ ಕಿರಿಯ ವಕೀಲರುಗಳು, ಸಂಘದ ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.