ಬೆಳ್ತಂಗಡಿ: ಶಾಸಕರಿಗೆ ತಾಕತ್ತಿದ್ದರೆ ದೂರನ್ನು ಸವಾಲಾಗಿ ಸ್ವೀಕರಿಸಿ ತನಿಖೆ ಎದುರಿಸಲಿ: ಪತ್ರಿಕಾಗೋಷ್ಠಿಯಲ್ಲಿ ಶೇಖರ್ ಲಾಯಿಲ ಆಗ್ರಹ

ಬೆಳ್ತಂಗಡಿ:  ಬಳೆಂಜ ಗ್ರಾಮದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ  ಮೇ.14 ರಂದು   ನಡೆದ ಭಜನಾ ಸ್ಪಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕರ ಸಾಧನೆ ಮತ್ತು ಕಾರ್ಯ ಪ್ರತ್ಯಕ್ಷವಾಗಿ ನೋಡಿರುವ ಬಿಜೆಪಿ ಕಾರ್ಯಕರ್ತ  ಹರೀಶ್ ವೈ ಚಂದ್ರಮ ಬಳೆಂಜ ರವರು ತಮ್ಮ ಭಾಷಣದಲ್ಲಿ ಶಾಸಕರ ಬಗ್ಗೆ ಹೇಳಿರುವ ವಿಷಯಕ್ಕೆ

ಸಂಬಧಿಸಿದ ಇಲಾಖೆಗಳಿಗೆ ದೂರು ನೀಡಿದ ಬಳಿಕ ಶಾಸಕ ಹರೀಶ್ ಪೂಂಜರವರು ಭಯ ಭೀತಿಗೊಂಡು ಪ್ರಕರಣದ ವರದಿ ಮಾಡಿದ ಪತ್ರಕರ್ತರಿಗೆ    ಧಮ್ಮಿ ಹಾಕುವುದು ಸೇರಿದಂತೆ, ದೂರುದಾರರನ್ನು ಸಾರ್ನಿವಕ ಅಪಮಾನವಾಗುವಂತೆ   ಮಾತನಾಡುತ್ತಿರುವುದು ಶಾಸಕರ ಘನತೆಗೆ ತಕ್ಕುದಾದುದ್ದಲ್ಲ, ಇದು ಪ್ರಜಾಪ್ರಭುತ್ವ ವ್ಯವಸ್ಥೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಸ್ಕಾರ, ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ ಎಂದು ಬೊಬ್ಬಿಡುವ ಶಾಸಕರು ಸಂಸ್ಕೃತಿ, ಸಂಸ್ಕಾರ ಹೀನರಂತೆ ವರ್ತಿಸುವುದು ಸರಿಯಲ್ಲ. ಶಾಸಕರಿಗೆ ತಾಕತ್ತಿದ್ದರೆ ದೂರನ್ನು ಸವಾಲಾಗಿ ಸ್ವೀಕರಿಸಿ ತನಿಖೆ ಎದುರಿಸಲಿ.

ಶಾಸಕ ಹರೀಶ್ ಪೂಂಜ ಅವರ ಶ್ರಮಿಕ ಕಚೇರಿಉ ಹಾಗೂ ಮನೆಯಲ್ಲಿ ನಗದು ರೂಪದ ಹಣವನ್ನು ಶೇಖರಣೆ ಮಾಡಿಕೊಂಡಿರುವುದು ಕಾನೂನು ಬಾಹಿರ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ಮತ್ತು ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ 2002 ಕಾಯ್ದೆಯ ಸೆಕ್ಷನ್ 3 ರಡಿ ಅಪರಾಧವಾಗುತ್ತದೆ. ಶಾಸಕರಲ್ಲಿ ಆದಾಯಕ್ಕೆ ಮೀರಿದ ಹಣವಿದ್ದು, ಆ ಹಣದ ಮೂಲ ಬಹಿರಂಗವಾಗಬೇಕು. ಜೊತೆಗೆ ಸಾರ್ವಜನಿಕವಾಗಿ ಪ್ರತ್ಯಕ್ಷದರ್ಶಿಯಾಗಿ ಹೇಳಿಕೆ ಕೊಟ್ಟಿರುವ ಹರೀಶ್ ವೈ ಚಂದ್ರಮ ಅವರನ್ನು ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಹಾಗೂ ಹೇಳಿಕೆದಾರನಾಗಿ ಪಿಎಂಎಲ್ ಎ 2002 ರ ಕಲಂ 3 ರ ಪ್ರಕಾರ ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸುತ್ತೇನೆ. ನಾನು ಈ ಪ್ರಕರಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದು ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ತಪ್ಪಿದ್ದಲ್ಲಿ ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಬೇಕಾದ ಅನಿವಾರ್ಯತೆ ಇದೆ. ಈ ಹೋರಾಟದ ಮುಂದಿನ ಅಂಗವಾಗಿ ಚೀಲ ಚಳವಳಿ ಆಂದೋಲನ ಕೈಗೆತ್ತಿಕೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಶೇಖರ್ ಲಾಯಿಲ ಆಗ್ರಹಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.