ಬೆಳಾಲು:ಶ್ರೀ ರಾಮ ಶಾಖೆ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಬೆಳಾಲಿನ ಎರಡು ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು.
ಆದರ್ಶ ನಗರ ಎಂಬಲ್ಲಿ ವಾಸವಾಗಿರುವ ಬಾಬು ಗೌಡ ಇವರು ಎರಡು ಕಾಲುಗಳು ಬಲ ಹೀನತೆ ಕಾಯಿಲೆಯಿಂದ ಬಳಲುತ್ತಿದ್ದು ಅವರ ಪತ್ನಿ ಶ್ರೀಮತಿ ಸೀತಾ ಅವರಿಗೂ ಅನಾರೋಗ್ಯದಿಂದ ದುಡಿಯಲಾಗುತ್ತಿಲ್ಲ. ವಾಸದ ಮನೆಯೂ ಶಿಥಿಲಗೊಂಡಿದ್ದು ಕುಟುಂಬಕ್ಕೆ ಯಾವುದೇ ರೀತಿಯ ಆದಾಯ ಇಲ್ಲದೆ ಕುಟುಂಬಕ್ಕೆ ತಲಾ 7600/ ರೂ ನೆರವು ನೀಡಲಾಯಿತು .
ಹಾಗೂ ಬೆಳಾಲು ಗ್ರಾಮದ ಕೋಲ್ಪಾಡಿ ಬಾಬು ಕೂಜನೋಟ್ಟು ವಾಸವಾಗಿರುವ ಮನೆಯೂ ಶಿಥಿಲಗೊಂಡಿದ್ದು ಕುಟುಂಬಕ್ಕೆ ಎಲ್ಲ ಕಾರ್ಯಕರ್ತರಿಂದ ಸಂಗ್ರಹಿಸಿ ತಲಾ 5000 ಸಹಾಯ ಧನ ನೀಡಲಾಯಿತು.