ನಾರಾವಿ: ಪ್ರಸಕ್ತ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ನಾರಾವಿ ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ವಿಜೇತಾ 610, ಸುಧೀಕ್ಷ್ 610, ಸುದೀಕ್ಷಾ 605, ರೋಹನ್ 587, ಪ್ರನಿತ್ 580, ವರ್ಷಿತಾ 570 ಅಂಕ ಗಳಿಸಿದ್ದಾರೆ.
ಒಟ್ಟು 68 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 61 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸದ್ರಿ ಶಾಲೆಗೆ ಶೇ.89.71 ಫಲಿತಾಂಶ ಬಂದಿರುತ್ತದೆ. ಈ ಪೈಕಿ 15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ, 1 ತೃತೀಯ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ.