ಅಂತರಾಷ್ಟೀಯ”ಆರ್ಯಭಟ” ಪ್ರಶಸ್ತಿ ಪುರಸ್ಕೃತ ಉದಯ ಕುಮಾರ್ ಲಾಯಿಲರವರಿಗೆ ಭಾರತೀಯ ಜನತಾ ಪಾರ್ಟಿ ಲಾಯಿಲ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನ

ಲಾಯಿಲ: ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿ ಮೊದಲಬಾರಿಗೆ ಜಾನಪದ ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ಮಾಡಿ ಅಂತರಾಷ್ಟೀಯ ಆರ್ಯಭಟ ಪ್ರಶಸ್ತಿಗೆ ಭಾಜನರಾದ ಲಾಯಿಲ ಗ್ರಾಮದ ಹೆಮ್ಮೆಯ ಕಲಾವಿದ  ಉದಯ್ ಕುಮಾರ್ ಲಾಯಿಲ ಇವರನ್ನು ಭಾರತೀಯ ಜನತಾ ಪಾರ್ಟಿ ಲಾಯಿಲ ಶಕ್ತಿ ಕೇಂದ್ರದ ವತಿಯಿಂದ ಮೇ.19ರಂದು ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರುಕ್ಮಯ ಕನ್ನಾಜೆ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ  ಈಶ್ವರ ಬೈರ, ಬೂತ್ ಅಧ್ಯಕ್ಷ ರಾಜೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ದನಾ , ಉಪಾಧ್ಯಕ್ಷ ಗಣೇಶ್ ಆರ್. ಸದಸ್ಯರಾದ ದಿನೇಶ್ ಶೆಟ್ಟಿ, ಅರವಿಂದ್ ಕುಮಾರ್, ಆಶಾಲತಾ ಪ್ರಶಾಂತ್, ಕಾರ್ಯಕರ್ತರಾದ ಸುಜಿತ್ ಗುರಿಂಗಾನ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.