ಕಳಿಯ: ಕಟ್ಟಡ ಕಾರ್ಮಿಕರ ಉಚಿತ ಆರೋಗ್ಯ ತಪಾಸಣೆ ಶಿಬಿರ

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮೇ.13 ರಂದು ಕಳಿಯ ಗ್ರಾಮ ಪಂಚಾಯತು ಕಛೇರಿ ಸಭಾಂಗಣದಲ್ಲಿ ಜರುಗಿತು.

ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಬೆಳ್ತಂಗಡಿ ಭಾರತೀಯ ಮಜ್ದೂರು ಸಂಘದ ರಾಜ್ಯ ಉಪಾಧ್ಯಕ್ಷ ಜಯರಾಜ್ ಸಾಲಿಯಾನ್ ಮಾತನಾಡುತ್ತಾ ರಾಜ್ಯ ಸರಕಾರದ ಯೋಜನೆಗಳಲ್ಲಿ ಒಂದಾದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕುಟುಂಬದ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ.
ಕಾರ್ಮಿಕ ವರ್ಗದ ಅರ್ಹ ಕುಟುಂಬದ ಶಾಲಾ ಮಕ್ಕಳಿಗೆ ವಿಧ್ಯಾರ್ಥಿ ವೇತನ, ಉಚಿತ ಆರೋಗ್ಯ ತಪಾಸಣೆ, ಪಿಂಚಣಿ, ವಿವಿಧ ಸವಲತ್ತುಗಳು ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆ ವೈದ್ಯಧಿಕಾರಿ ಡಾ.ದೇವಿಕಾ, ಕಳಿಯ ಗ್ರಾಮ ಸದಸ್ಯ ಹಾಗೂ ಗೇರುಕಟ್ಟೆ ಶ್ರೀ ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ದಿವಾಕರ ಮೆದಿನ, ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಕಳಿಯ ಗ್ರಾ. ಪಂ ಕಾರ್ಯದರ್ಶಿ ಕುಂಞಣ್ಣ, ಬಿಎಂಎಸ್ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ, ಗೇರುಕಟ್ಟೆ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಹಾಗೂ ಗೇರುಕಟ್ಟೆ ಬಿಎಂಎಸ್ ಗ್ರಾಮ ಸಮಿತಿ ಕಾರ್ಯದರ್ಶಿ ನಂದೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳಿಯ ಕೃಷಿ ಪತ್ತಿನ ಸಹಕಾರ ಸಂಘ, ಕಳಿಯ ಗ್ರಾಮ ಪಂಚಾಯತು, ಗೇರುಕಟ್ಟೆ ಭಾರತೀಯ ಮಜ್ದೂರು ಸಂಘ, ಗೇರುಕಟ್ಟೆ ಶ್ರೀ ಗುರು ನಾರಾಯಣ ಸೇವಾ ಸಂಘ ಮತ್ತು ಗೇರುಕಟ್ಟೆ ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ, ಮಾಲಕರ ಸಂಘ ನೇತೃತ್ವವನ್ನು ವಹಿಸಿದ್ದರು. ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಿಬ್ಬಂದಿಗಳು ತಪಾಸಣೆ ನಡೆಸಿ ಕೊಟ್ಟರು.

ಕಳಿಯ ಗ್ರಾ. ಪಂ. ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ, ಸದಸ್ಯರಾದ ಸುಧಾಕರ ಮಜಲು, ಯಶೋಧರ ಶೆಟ್ಟಿ ಮಾಣಿಕ್ಯ, ಮಾಜಿ ಅಧ್ಯಕ್ಷ ತುಕಾರಾಮ ಪೂಜಾರಿ, ಕಳಿಯ ಸಿ.ಎ.ಬ್ಯಾಂಕ್ ನಿರ್ದೇಶಕ ಶೇಖರ ನಾಯ್ಕ, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಸದಸ್ಯರು, ಕಳಿಯ ಪಂಚಾಯತು ಸಿಬ್ಬಂದಿಗಳು, ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿವೃತ್ತ ಅಂಚೆ ಪಾಲಕ ವಿಠ್ಠಲ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ, ಬೆಳ್ತಂಗಡಿ ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬಡ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತು ಕಾರ್ಯದರ್ಶಿ ಕುಂಞಣ್ಣ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.