ಲಾಯಿಲ: 25 ಅಡಿ ಆಳದ ಬಾವಿಗೆ ಬಿದ್ದ ದನ: ರಕ್ಷಿಸಲು ಹರಸಾಹಸ ಪಟ್ಟ ಅಗ್ನಿಶಾಮಕ ದಳ

ಲಾಯಿಲ: ಲಾಯಿಲ ಗ್ರಾಮದ ಕುಂಡಡ್ಕ ಎಂಬಲ್ಲಿ  ಅಂಗಳದಲ್ಲಿದ್ದ ದನವೊಂದು 25 ಅಡಿ ಆಳವಿರುವ ಬಾವಿಗೆ ಬಿದ್ದ ಘಟನೆ ಮೇ.14 ರಂದು ನಡೆದಿದೆ.

ತಕ್ಷಣದಲ್ಲೇ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ   ಬಾವಿಯ ನೀರನ್ನು ಪಂಪ್ ಮೂಲಕ ತೆರವುಗೊಳಿಸಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ದನವನ್ನು ಬಾವಿಯಿಂದ ಎತ್ತಿ ರಕ್ಷಿಸಿದ್ದಾರೆ.

ಬಾವಿಯಲ್ಲಿ ನೀರು ಇದ್ದುದರಿಂದ ದನಕ್ಕೆ ಯಾವುದೇ ರೀತಿಯ ಗಾಯಗಳಾಗಿಲ್ಲ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಾದ ಠಾಣಾಧಿಕಾರಿ ಕೆ ವಿಶ್ವನಾಥ್ ಪೂಜಾರಿ, ಚಾಲಕ ಲಿಂಗರಾಜ್ ಲಮಾಣಿ, ಮಂಗಳದಾಸ್ ನಾಯ್ಕ್, ಮಹಮ್ಮದ್ ಜಂಬಗಿ, ವಿನೋದ್ ರಾಜ್ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿಉ ಸೇರಿದಂತೆ ಸ್ಥಳೀಯರು ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.